×
Ad

ಲತೀಫ್ ಸಖಾಫಿ ಗೂನಡ್ಕರಿಗೆ ರಾಜ್ಯ ಮುಅಲ್ಲಿಂ ಅವಾರ್ಡ್

Update: 2025-10-26 20:09 IST

ಸುಳ್ಯ: ಸಮಸ್ತ ಸೆಂಚುನರಿ ಪ್ರಯುಕ್ತ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಎಸ್‍ಜೆಎಂ ರಾಜ್ಯ ಸಮಿತಿ ಸಾಧಕ ಮುಅಲ್ಲಿಮರಿಗೆ ಗೌರವಾರ್ಪಣೆಯಾಗಿ ನೀಡಿದ ರಾಜ್ಯ ಮಟ್ಟದ ಮುಅಲ್ಲಿಂ ಅವಾರ್ಡ್‍ನ್ನು ಸುಳ್ಯದ ಜಟ್ಟಿಪಳ್ಳ ಮದ್ರಸ ಸದರ್ ಮುಅಲ್ಲಿಂ ಲತೀಫ್ ಸಖಾಫಿ ಗೂನಡ್ಕ ಅವರಿಗೆ ನೀಡಲಾಗಿದೆ.

ಮಂಗಳೂರಿನ ಪುರಭವನದಲ್ಲಿ ನಡೆದ ಮುಅಲ್ಲಿಂ ಜಿಲ್ಲಾ ಸಮ್ಮೇಳನದಲ್ಲಿ ಎಸ್ ಜೆ ಎಂ ಕೇಂದ್ರ ಸಮಿತಿ ಅಧ್ಯಕ್ಷರಾದ ಅಮೀನು ಶ್ಶರೀಅಃ ಅಸ್ಸೆಯ್ಯಿದ್ ಅಲೀ ಬಾಫಖಿ ತಂಙಳ್ ರವರು ಪ್ರಶಸ್ತಿ ಪ್ರದಾನ ಮಾಡಿದರು. ಸಮಾರಂಭದಲ್ಲಿ ಖುದುವತ್ತು ಸ್ಸಾದಾತ್ ಅಸ್ಸೆಯ್ಯಿದ್ ಕೆ.ಎಸ್ ಆಟಕೋಯ ತಂಙಳ್ ಕುಂಬೋಲ್, ಝೈನುಲ್ ಉಲಮಾ ಮಾಣಿ ಉಸ್ತಾದ್, ಎಸ್ ಜೆ ಎಂ ರಾಜ್ಯಾಧ್ಯಕ್ಷ ಜೆಪ್ಪು ಅಬ್ದುಲ್ ರಹ್ಮಾನ್ ಮದನಿ ಉಪಸ್ಥಿತರಿದ್ದರು.

ಈ ಸಂದಂರ್ಭ ಎಸ್ ಜೆ ಎಂ ಸುಳ್ಯ ರೇಂಜ್ ಅಧ್ಯಕ್ಷ ಅಬೂಬಕ್ಕರ್ ಮುಸ್ಲಿಯಾರ್ ಬದಿಯಡ್ಕ, ಎಸ್ ಎಂ ಎ ಜಿಲ್ಲಾ ಕೋಶಾಧಿಕಾರಿ ಅಬ್ದುಲ್ ಲತೀಫ್ ಹರ್ಲಡ್ಕ, ಎಸ್ ಎಂ ಎ ಸುಳ್ಯ ರೀಜ್ಯನಲ್ ಅಧ್ಯಕ್ಷ ಅಬ್ದುಲ್ ಹಮೀದ್ ಸುಣ್ಣ ಮೂಲೆ ಮೊದಲಾದ ಪ್ರಮುಖರು ಇದ್ದರು. ಪ್ರಸ್ತುತ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ಅವರು ಗಾಂಧಿನಗರದ ಕೇಂದ್ರ ಮದ್ರಸದಲ್ಲಿಸೇವೆಗೈದು, ಸುಳ್ಯ ರೇಂಜ್ ಪ್ರಧಾನ ಕಾರ್ಯದರ್ಶಿಗಳಾಗಿ, ಎರಡು ವರ್ಷಗಳಿಂದ ಜಟ್ಟಿಪಳ್ಳದ ಬುಸ್ತಾನುಲ್ ಉಲೂಂ ಮದ್ರಸ ಸದರ್ ಮುಅಲ್ಲಿಮರಾಗಿ ಸೇವೆಗೈಯ್ಯುತ್ತಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News