×
Ad

ಪೇಜಾವರ ಶ್ರೀ ವಿಶ್ವೇಶತೀರ್ಥ ನಮನ: ಜೀವಮಾನ ಸಾಧನಾ ಪ್ರಶಸ್ತಿ ಪ್ರದಾನ

Update: 2025-12-30 19:42 IST

ಮಂಗಳೂರು, ಡಿ.30: ಕಲ್ಕೂರ ಪ್ರತಿಷ್ಠಾನ ಮಂಗಳೂರು ಇದರ ವತಿಯಿಂದ ಪೇಜಾವರ ವಿಶ್ವೇಶತೀರ್ಥ ನಮನ ಹಾಗೂ ಹಿರಿಯ ಸಾಧಕರಿಗೆ ವಿಶ್ವೇಶತೀರ್ಥ ಜೀವಮಾನ ಸಾಧನಾ ಪ್ರಶಸ್ತಿ ಸಮಾರಂಭವು ಕದ್ರಿ ಕಂಬಳದ ಮಲ್ಲಿಕಾ ಬಡಾವಣೆಯಲ್ಲಿರುವ ಮಂಜುಪ್ರಾಸಾದ ನಿಲಯದ ವಿಶ್ವೇಶತೀರ್ಥ ವೇದಿಕೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಫಲಿಮಾರು ಮಠಾಧೀಶರಾದ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರು, ವಿಶ್ವೇಶತೀರ್ಥ ಶ್ರೀಪಾದರು ಇಡೀ ಜಗತ್ತೇ ಗೌರವದಿಂದ ಕಾಣುತ್ತಿದ್ದ ಯತಿ ಶ್ರೇಷ್ಠರು ಪೇಜಾವರ ವಿಶ್ವೇಶ ತೀರ್ಥರು ಎಂದರು.

ಮೂಡುಬಿದಿರೆ ಜೈನ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ ಸಂತ ಸಮೂಹಕ್ಕೆ ಗೌರವ ತಂದು ಕೊಟ್ಟ ಮಹಾ ಸಂತರು ವಿಶ್ವೇಶತೀರ್ಥರು ಎಂದರು.

ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರ ತೀರ್ಥ ಮಾತನಾಡಿ ಪೇಜಾವರ ವಿಶ್ವೇಶತೀರ್ಥ ಶ್ರೀಪಾದರು ಯತಿ ಕುಲಕ್ಕೆ ಚಕ್ರವರ್ತಿಯಂತಿದ್ದರಲ್ಲದೆ, ಯತಿಗಳೂ ಮಹತ್ತರ ಸಾಧನೆ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟ ಯತಿ ಶ್ರೇಷ್ಠರು ಎಂದು ನುಡಿದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಹಿರಿಯ ಸಾಧಕರಿಗೆ ಪೇಜಾವರ ಶ್ರೀ ವಿಶ್ವೇಶತೀರ್ಥ ಜೀವಮಾನ ಸಾಧನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವಿದ್ವಾನ್ ಹೃಷಿಕೇಶ ಬಾಯರಿ, ಬಾರಕೂರು (ವೈದಿಕ ವಿದ್ವಾಂಸರು), ಪೆರ್ಣಂಕಿಲ ಲಕ್ಷ್ಮೀ ನಾರಾಯಣ ಭಟ್ (ಯಜ್ಞಣ್ಣ)(ಪಾಕ ಶಾಸ್ತ್ರಜ್ಞರು), ದಿನೇಶ್ ಭಟ್ ಕದ್ರಿ(ಧಾರ್ಮಿಕ-ವೈದಿಕ ಸೇವೆ), ಡಾ.ಚಂದ್ರಶೇಖರ ದಾಮ್ಲೆ (ಕನ್ನಡ ಸೇವೆ), ಜೇಮ್ಸ್ ವಿನ್ಸೆಂಟ್ ಮೆಂಡೋನ್ಸ(ಸಮಾಜ ಸೇವೆ), ಡಾ.ಎ.ಕೆ ವೆಂಕಟಗಿರಿ ರಾವ್ (ವೈದ್ಯಕೀಯ ಗ್ರಾಮೀಣ ಸೇವೆ), ಉಮೇಶ್ ನಾಥ್ ಜೋಗಿ ಕದ್ರಿ (ಧಾರ್ಮಿಕ ಸೇವೆ), ಎಡಕ್ಕಾನ ಮಹಾಬಲೇಶ್ವರ ಭಟ್ ( ಉದ್ಯಮ ಸಮಾಜ ಸೇವೆ), ಎರ್ಮಾಳು ಹಿದಾಯತ್ತುಲ್ಲಾ ಸಾಹೇಬ್ (ಶಾಸ್ತ್ರೀಯ ವಾದ್ಯ ಸಂಗೀತ), ಪ್ರೊ.ಎ.ಕೃಷ್ಣಪ್ಪ ಪೂಜಾರಿ ಬೆಳ್ತಂಗಡಿ (ಶಿಕ್ಷಣ/ಧಾರ್ಮಿಕ ಸೇವೆ), ಜನಾರ್ದನ ಹಂದೆ (ಯಕ್ಷಗಾನ ಸಂಘಟಕ), ವಿಶು ಶೆಟ್ಟಿ ಅಂಬಲಪಾಡಿ (ಸಮಾಜ ಸೇವೆ), ಶಿರವಂತೆ ಸುರೇಂದ್ರ ರಾವ್ (ಧಾರ್ಮಿಕ ಸಂಘಟನೆ), ಪಿ.ಡಿ ಶೆಟ್ಟಿ ಮುಂಬೈ (ಕನ್ನಡ ಸೇವೆ), ಬಿ.ವಿಜಯಲಕ್ಷ್ಮೀ ಶೆಟ್ಟಿ (ಮಹಿಳಾ ಸಂಘಟನೆ ಕನ್ನಡ ಸೇವೆ), ಕಾಂಚನ ಈಶ್ವರ ಭಟ್ ಪುತ್ತೂರು (ಶಾಸ್ತ್ರೀಯ ಸಂಗೀತ), ಮುನಿಯಾಲು ದಾಮೋದರ ಆಚಾರ್ಯ (ಸಾಂಪ್ರದಾಯಿಕ ಸ್ವರ್ಣಶಿಲ್ಪ), ಕವಿತಾ ಶಾಸ್ತ್ರಿ (ಸಮಾಜಿ ಸೇವೆ/ಶಿಕ್ಷಣ), ಎಂ.ಮಾಧವ ಆಚಾರ್ಯ ಇಜ್ವಾವು (ಜ್ಯೋತಿಷ ವಿದ್ವಾಂಸರು) ಪ್ರಶಸ್ತಿ ಸ್ವೀಕರಿಸಿದರು.

ವೇ.ಮೂ ಕುಡುಪು ನರಸಿಂಹ ತಂತ್ರಿ, ಕದ್ರಿ ಪ್ರಭಾಕರ ಅಡಿಗ, ಕರ್ಣಾಟಕ ಬ್ಯಾಂಕ್‌ನ ಆಡಳಿತ ನಿರ್ದೇಶಕ ಹಾಗೂ ಕಾರ್ಯನಿರ್ವಹಣಾಧಿಕಾರಿ ರಾಘವೇಂದ್ರ ಭಟ್, ಪ್ರೊ. ಜಿ.ಕೆ ಭಟ್, ಡಾ.ಎಂ.ಪ್ರಭಾಕರ ಜೋಶಿ, ನವನೀತ ಶೆಟ್ಟಿ ಕದ್ರಿ, ಪ್ರಭಾಕರ ರಾವ್ ಪೇಜಾವರ, ಸುಧಾಕರ ರಾವ್ ಪೇಜಾವರ, ಪೂರ್ಣಿಮಾ ರಾವ್ ಪೇಜಾವರ, ಮತ್ತಿತರರು ಉಪಸ್ಥಿತರಿದ್ದರು.

ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ಸ್ವಾಗತಿಸಿ,ಪ್ರಸ್ತಾವನೆಗೈದರು, ವಿವಿಧ ತಂಡಗಳಿಂದ ಕೃಷ್ಣ ಗೀತ ಗಾಯನ, ಮತ್ತು ‘ವಂದೇ ಮಾತರಂ’ ದೇಶ ಭಕ್ತಿ ಗೀತೆಯ 150 ವರ್ಷಾಚರಣೆ ಪ್ರಯುಕ್ತ ಭಾರತ ಮಾತಾ ಪೂಜನ ನಡೆಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News