×
Ad

ಯುವಕ ಯುವತಿಯರಿಗೆ ಉಚಿತ ಕೌಶಲ್ಯ ತರಬೇತಿ

Update: 2025-12-30 19:51 IST

ಮಂಗಳೂರು: ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆ (ಕೆಜಿಟಿಟಿಐ)ಯು ನಗರದ ಕದ್ರಿಹಿಲ್ಸ್‌ನಲ್ಲಿರುವ ಮಹಿಳಾ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ದೀನದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ ಅಡಿಯಲ್ಲಿ ಎಚ್.ವಿ.ಎ.ಸಿ. ಟೆಕ್ನಿಷನ್ , ಎಚ್‌ವಿಎಸಿ. ಇಂಜಿನಿಯರ್, ಗ್ಯಾಸ್ ಟಂಗ್‌ಸ್ಟ್‌ನ್ ಆರ್ಕ್ ವೆಲ್ಡಿಂಗ್ ಹಾಗೂ ಫಿಲ್ಡ್ ಟೆಕ್ನಿಷನ್ ನೆಟ್‌ವರ್ಕ್ ಸ್ಟೋರೆಜ್ ಒಳಗೊಂಡಂತೆ ಅಲ್ಪಾವಧಿ ಕೋರ್ಸ್‌ಗಳಲ್ಲಿ ಉಚಿತ ಕೌಶಲ್ಯ ತರಬೇತಿ ನೀಡಿ ಉದ್ಯೋಗಸ್ಥರನ್ನಾಗಿಸುವ ನಿಟ್ಟಿನಲ್ಲಿ ಅರ್ಜಿ ಆಹ್ವಾನಿಸಲಾಗಿದೆ.

ಐಟಿಐ, ಡಿಪ್ಲೋಮಾ ಹಾಗೂ ಪದವಿ ಪೂರೈಸಿರುವ ಅರ್ಹ ಯುವಕ ಯುವತಿಯರು ಕಚೇರಿ ವೇಳೆಯಲ್ಲಿ ನಗರದ ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆಯನ್ನು ಸಂಪರ್ಕಿಸಿ ಉಚಿತ ಕೌಶಲ್ಯ ತರಬೇತಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 0824-2211477, 8277741731 ಸಂಪರ್ಕಿಸಬಹುದು ಎಂದು ಕೆಜಿಟಿಟಿಐ ನಿರ್ದೇಶಕರು ಪ್ರಕಟನೆೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News