×
Ad

ಬಂಟ್ವಾಳ: ಮೀಫ್ ವತಿಯಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಎರಡು ದಿವಸಗಳ ಕಾರ್ಯಾಗಾರ

Update: 2025-12-30 19:45 IST

ಮಂಗಳೂರು, ಡಿ.30: ಮೀಫ್ ಕೇಂದ್ರ ಘಟಕದ ವತಿಯಿಂದ ಜಿಲ್ಲಾದ್ಯಂತ ಏರ್ಪಡಿಸಲಾಗಿರುವ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಸರಣಿ ಕಾರ್ಯಕ್ರಮಗಳ ಅಂಗವಾಗಿ, ಬಂಟ್ವಾಳ ತಾಲೂಕಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಎರಡು ದಿವಸಗಳ ಪಾಸಿಂಗ್ ಪ್ಯಾಕೇಜ್ ಕಾರ್ಯಾಗಾರವು (ಏಳನೇ ಮತ್ತು ಎಂಟನೇ ಕಾರ್ಯಾಗಾರ) ಮಂಗಳವಾರ ಗೋಳ್ತಮಜಲ್ ಜೆಮ್ ಪಬ್ಲಿಕ್ ಸ್ಕೂಲ್‌ನಲ್ಲಿ ಆರಂಭಗೊಂಡಿತು.

ಹಿದಾಯ ಫೌಂಡೇಶನ್ ಮಂಗಳೂರು ಇವರ ಸಹಯೋಗದೊಂದಿಗೆ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಾಲತಿ ಕೆ. ಇವರು ಕಾರ್ಯಾಗಾರವನ್ನು ಉದ್ಘಾಟಿಸಿ, ಶಿಕ್ಷಣವೇ ಮುಂದಿನ ಜೀವನವನ್ನು ರೂಪಿಸಲು ಅಡಿಪಾಯವಾಗಲಿದೆ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿ, ಮೀಫ್ ಸಂಸ್ಥೆಯನ್ನು ಅಭಿನಂದಿಸಿದರು.

ಮೀಫ್ ಅಧ್ಯಕ್ಷರಾದ ಮೂಸಬ್ಬ ಪಿ.ಬ್ಯಾರಿ ಜೋಕಟ್ಟೆ ಕಾರ್ಯಾಗಾರ ಸಂಘಟಿಸಿರುವ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜೆಮ್ ಪಬ್ಲಿಕ್ ಸ್ಕೂಲ್ ಅಧ್ಯಕ್ಷ ಹನೀಫ್ ಹಾಜಿ ಗೋಳ್ತಮಜಲ್ ಅಧ್ಯಕ್ಷತೆ ವಹಿಸಿದ್ದರು.

ಮೀಫ್ ಸಂಸ್ಥೆಯ ಉಪಾಧ್ಯಕ್ಷ ಪರ್ವೇಜ್ ಅಲಿ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು.

ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ರೋಷನ್ ಪಿಂಟೊ, ಕಿಶೋರ್ ಮತ್ತು ನೆಲ್ಸನ್ ಭಾಗವಹಿಸಿದ್ದರು.

ತಾಲೂಕಿನ 9 ವಿದ್ಯಾಸಂಸ್ಥೆಗಳಿಂದ ಆಯ್ದ 150 ಕ್ಕೂ ಹೆಚ್ಚು ಅಧಿಕ ವಿದ್ಯಾರ್ಥಿಗಳು ಕಾರ್ಯಾಗಾರದ ಪ್ರಯೋಜನ ಪಡೆದರು.

ಕಾರ್ಯಕ್ರಮದಲ್ಲಿ ಮೀಫ್ ಸಂಸ್ಥೆಯ ಪದಾಧಿಕಾರಿಗಳಾದ ರಝಾಕ್ ಹಜ್ಜಾಜ್ ಮತ್ತು ಜೆಮ್ ಸಂಸ್ಥೆಯ ಟ್ರಸ್ಟಿ ಅಲ್ತಾಫ್ ಉಪಸ್ಥಿತರಿದ್ದರು.

ಜೆಮ್ ಪಬ್ಲಿಕ್ ಸ್ಕೂಲ್ ಗೋಳ್ತಮಜಲ್ ಪ್ರಾಂಶುಪಾಲ ನಿರಂಜನ್ ಸ್ವಾಗತಿಸಿದರು. ಜೆಮ್ ಶಿಕ್ಷಕಿ ಪಲ್ಲವಿರವರು ಕಾರ್ಯಕ್ರಮ ನಿರ್ವಹಿಸಿದರು.

ಕಾರ್ಯಕ್ರಮದ ಸಂಚಾಲಕರಾದ ಅಝೀಝ್ ಅಂಬರ್‌ವ್ಯಾಲಿ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News