×
Ad

ಶಿಕ್ಷಣ, ಸಾಹಿತ್ಯದ ಶಕ್ತಿಯೊಂದಿಗೆ ಮಹಿಳೆಯರು ಸಶಕ್ತರಾಗಬೇಕು: ಶಕುಂತಲಾ ಶೆಟ್ಟಿ

Update: 2025-12-30 20:32 IST

ಬಲ್ಮಠ; ಸಾಹಿತ್ಯ ಅಭಿರುಚಿ ಕಾರ್ಯಕ್ರಮ ಮಂಗಳೂರು,ಡಿ.30;ಮಹಿಳೆಯರು ಶಿಕ್ಷಣದ ಜೊತೆ ಸಾಹಿತ್ಯದ ಓದಿನೊಂದಿಗೆ ಇನ್ನಷ್ಟು ಸಶಕ್ತರಾಗಬೇಕು ಎಂದು ಮಾಜಿ ಶಾಸಕಿ ಹಾಗೂ ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ಅಧ್ಯಕ್ಷೆ ಶಕುಂತಲಾ ಶೆಟ್ಟಿ ತಿಳಿಸಿದ್ದಾರೆ.

ಅವರು ಮಂಗಳವಾರ ನಗರದ ಬಲ್ಮಠ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಅಮೃತ ಪ್ರಕಾಶ ಪತ್ರಿಕೆಯ ಸಹಯೋಗದಲ್ಲಿ 116ನೇಯ ಸಾಹಿತ್ಯ ಅಭಿರುಚಿ ಕಾರ್ಯಕ್ರಮದ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಾ, ಓದುವ ಹವ್ಯಾಸ ಮುಂದುವರಿಸಬೇಕು.ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡುವಂತಾಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಪ್ರಾಂಶುಪಾಲರಾದ ವನಿತಾ ದೇವಾಡಿಗ ವಹಿಸಿದರು. ಮುಖ್ಯ ಸಂಪನ್ಮೂಲ ಅತಿಥಿಯಾಗಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಪುಷ್ಪರಾಜ್ ಬಿ.ಎನ್ ಸಾಹಿತ್ಯ ಅಭಿರುಚಿಯ ಬಗ್ಗೆ ಉಪನ್ಯಾಸ ನೀಡಿದರುಹಾಗೂ ನಿವೃತ್ತ ಪ್ರಾಂಶುಪಾ ಲರಾದ ಪ್ರೊ.ಕೃಷ್ಣಮೂರ್ತಿ ಯವರು ಸಾಹಿತ್ಯ ಅಭಿರುಚಿಗೆ ಆಸಕ್ತಿ ಮುಖ್ಯ ಎಂದರು.

ನಿವೃತ್ತ ಶಿಕ್ಷಕಿ ಲೇಖಕಿ ಸುಧಾನಾಗೇಶ್ ಕಾರ್ಯಕ್ರಮ ನಿರೂಪಿಸಿದರು ಅಮೃತ ಪ್ರಕಾಶ ಪತ್ರಿಕೆ ವ್ಯವಸ್ಥಾಪಕ ಸಂಪಾದಕಿ ಡಾ. ಮಾಲತಿ ಶೆಟ್ಟಿ ಮಾಣೂರು ಸ್ವಾಗತಿಸಿದರು. ಕನ್ನಡ ಉಪನ್ಯಾಸಕಿ ಯಶೋಧರವರು ವಂದಿಸಿದರು.







 


 


 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News