×
Ad

ರಾಜ್ಯ ಮಟ್ಟದ ಪ್ರತಿಭಾ ಶೋಧ -ಮೀಫ್ ಸಿವಿಲ್ ಕ್ವೆಸ್ಟ್ ಸ್ಪರ್ಧೆಯ ಫಲಿತಾಂಶ

Update: 2026-01-29 20:27 IST

ಮಂಗಳೂರು, ಜ.29: ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಮೀಫ್), ಇದರ ಆಶ್ರಯದಲ್ಲಿ ಬುಧವಾರ ಜಪ್ಪಿನಮೊಗರು ಯೆನೆಪೋಯ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೌಢ ಶಾಲೆ ಮತ್ತು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಅತ್ಯಂತ ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳಾದ ಐಎಎಸ್, ಐಪಿಎಸ್ ಮತ್ತು ಐಎಫ್‌ಎಸ್ ಬಗ್ಗೆ ಅರಿವು ಮೂಡಿಸಲು ಆಯೋಜಿಸಲಾದ ‘‘ಪ್ರತಿಭಾ ಶೋಧ ಮೀಫ್ ಸಿವಿಲ್ ಕ್ವೆಸ್ಟ್ 1.0 . ರಾಜ್ಯ ಮಟ್ಟದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಒಟ್ಟು 40 ವಿದ್ಯಾ ಸಂಸ್ಥೆಗಳ 154 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಮೀಫ್ ಶಾಲೆಗಳಲ್ಲಿ ಸಿವಿಲ್ ಸರ್ವಿಸ್ ತರಬೇತಿಯನ್ನು ಅಳವಡಿಸಲಾಗಿದ್ದು, 6 ಜಿಲ್ಲೆಗಳ 44 ವಿದ್ಯಾ ಸಂಸ್ಥೆಗಳ 4,000 ವಿದ್ಯಾರ್ಥಿಗಳು ಪ್ರತೀ ವಾರ ತರಬೇತಿಯನ್ನು ಪಡೆಯುತ್ತಿದ್ದಾರೆ. ಮೂರು ಹಂತದಲ್ಲಿ ನಡೆದ ಈ ಸ್ಪರ್ಧೆ ಯಲ್ಲಿ ಮೊದಲ ಹಂತದಲ್ಲಿ ಲಿಖಿತ ಪರೀಕ್ಷೆಯನ್ನು ಏರ್ಪಡಿಸಲಾಗಿತ್ತು. ಇದರಲ್ಲಿ ಅತ್ಯಂತ ಉನ್ನತ ಅಂಕ ಗಳಿಸಿದ 20 ವಿದ್ಯಾರ್ಥಿಗಳು 2ನೇ ಹಂತದಲ್ಲಿ ಸಾರ್ವಜನಿಕ ಭಾಷಣದಲ್ಲಿ ಭಾಗವಹಿಸಿದ್ದರು. ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಒಟ್ಟು 8 ಮಂದಿ ನೇರ ಸಂದರ್ಶನದಲ್ಲಿ ಭಾಗವಹಿಸಿ, ಪ್ರೌಢ ಶಾಲಾ ವಿಭಾದಲ್ಲಿ 3 ಮಂದಿ ಮತ್ತು ಪೂರ್ವ ಕಾಲೇಜು ವಿಭಾಗದಲ್ಲಿ 2 ಮಂದಿ ವಿಜೇತರಾಗಿ ಹೊರ ಹೊಮ್ಮಿದರು.

ವಿಜೇತರುಗಳ ವಿವರ ಇಂತಿವೆ:-

*ಪದವಿ ಪೂರ್ವ ವಿಭಾಗ : ಪ್ರಥಮ - ಮೀಫ್ ಶಾಲೆಗಳ 2026ರ ಬಡ್ಡಿಂಗ್ ಐಎಎಸ್ ಆಕಾಂಕ್ಷಿ ನಫೀಸಾ ಹೆಬತ್ ( ಸ್ನೇಹ ಪಬ್ಲಿಕ್ ಶಾಲೆ, ಪಕ್ಕಲಡ್ಕ), ದ್ವಿತೀಯ ಬಹುಮಾನ :ಮೀಫ್ ಶಾಲೆಗಳ 2026ರ ಬಡ್ಡಿಂಗ್ ಐಪಿಎಸ್ ಆಕಾಂಕ್ಷಿ -ಮುಹಮ್ಮದ್ ರಿಹಾನ್( ಬ್ಯಾರೀಸ್ ಸೀಸೈಡ್, ಕೋಡಿ, ಕುಂದಾಪುರ).

* ಪ್ರೌಢ ಶಾಲಾ ವಿಭಾಗ: - ಪ್ರಥಮ ಬಹುಮಾನ -ಮೀಫ್ ಶಾಲೆಗಳ 2026ರ ಬಡ್ಡಿಂಗ್ ಐಎಎಸ್ ಆಕಾಂಕ್ಷಿ: ಡಿಪ್ರೋ ಅಧಿಕಾರಿ(ನೋಬಲ್ ಆಂಗ್ಲ ಮಾಧ್ಯಮ ಶಾಲೆ, ಕುಂಜತ್‌ಬೈಲ್), ದ್ವಿತೀಯ ಬಹುಮಾನ -ಮೀಫ್ ಶಾಲೆಗಳ 2026ರ ಬಡ್ಡಿಂಗ್ ಐಪಿಎಸ್ ಆಕಾಂಕ್ಷಿ

ಫಾತಿಮಾ ಝವ್ಬಿಯ( ಹಿರಾ ಪ್ರೌಢ ಶಾಲೆ, ಬಬ್ಬುಕಟ್ಟೆ ), ತೃತೀಯ ಬಹುಮಾನ - ಮೀಫ್ ಶಾಲೆಗಳ 2026ರ ಬಡ್ಡಿಂಗ್ ಐಎಫ್‌ಎಸ್ ಆಕಾಂಕ್ಷಿ-ರಿಮಾನ್ ಅಬ್ದುಲ್ ಸಲಾಂ( ಕ್ರೆಸೆಂಟ್ ಇಂಟರ್‌ನ್ಯಾಷನಲ್ ಶಾಲೆ, ಕಾಪು) 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News