×
Ad

ಮಂಗಳೂರು: ಮುಕುಂದ್ ರಿಯಾಲ್ಟಿ ರುದ್ರಾಕ್ಷ್ ಐಷಾರಾಮಿ ಅಪಾರ್ಟ್‍ಮೆಂಟ್ ಯೋಜನೆಯ ಅನಾವರಣ

Update: 2026-01-29 18:59 IST

ಮಂಗಳೂರು: ಮುಂಚೂಣಿಯ ನಿರ್ಮಾಣ ಸಂಸ್ಥೆ ಮುಕುಂದ್ ರಿಯಾಲ್ಟಿ ಅತ್ಯಪೂರ್ವ ರುದ್ರಾಕ್ಷ್ ಐಷಾರಾಮಿ ಅಪಾರ್ಟ್‍ಮೆಂಟ್‍ನ ನೂತನ ಯೋಜನೆಯನ್ನು ತಣ್ಣೀರುಬಾವಿ ಬೀಚ್‍ನಲ್ಲಿ ಜರುಗಿದ ಡೆನ್ ಡೆನ್ ಅಂತಾರಾಷ್ಟ್ರೀಯ ಮುಕ್ತ ಈಜು ಚಾಂಪಿಯನ್‍ಶಿಪ್ ಸಂದರ್ಭ ಸಾಂಕೇತಿಕವಾಗಿ ಗಾಳಿಪಟ ಹಾರಿಸುವ ಮೂಲಕ ಅನಾವರಣಗೊಳಿಸಲಾಯಿತು.

ಆಹ್ವಾನಿತ ಅತಿಥಿಗಳು, ಕ್ರೀಡಾಪಟುಗಳು ಮತ್ತು ಸಂಸ್ಥೆಗಳ ಪದಾಧಿಕಾರಿಗಳ ಸಮ್ಮುಖದಲ್ಲಿ ಮುಕುಂದ್ ರಿಯಾಲ್ಟಿಯ ವ್ಯವಸ್ಥಾಪಕ ಪಾಲುದಾರರಾದ ಗುರುದತ್ತ ಶೆಣೈ, ಮಹೇಶ್ ಶೆಟ್ಟಿ ಮತ್ತು ಮಂಗಲದೀಪ್ ಎ.ಆರ್. ನೇತೃತ್ವದಲ್ಲಿ ರುದ್ರಾಕ್ಷ್ ಯೋಜನೆಯ ಮಾಹಿತಿ ಪತ್ರ ಅನಾವರಣಗೊಳಿಸಲಾಯಿತು.

ಅಭೂತಪೂರ್ವವಾಗಿ ನಡೆದ ಡೆನ್ ಡೆನ್ 2026 ಹೊಸ ಯೋಜನೆ ಅನಾವರಣಕ್ಕೆ ವೇದಿಕೆ ಕಲ್ಪಿಸಿತ್ತು. ಮಂಗಳೂರಿನಲ್ಲಿ ಮುಕುಂದ್ ರಿಯಾಲ್ಟಿಯು ಜಾಗತಿಕ ಮಟ್ಟದ ಜೀವನಶೈಲಿ ಆಧಾರಿತ ವಸತಿಗಳನ್ನು ಒದಗಿಸುವ ರುದ್ರಾಕ್ಷ್ ಪರಿಕಲ್ಪನೆಯನ್ನು ಇಲ್ಲಿ ಪರಿಚಯಿಸಿರುವುದು ಕಾರ್ಯಕ್ರಮದ ಕೇಂದ್ರ ಬಿಂದುವಾಗಿತ್ತು.

ರುದ್ರಾಕ್ಷ್ - ಹೈ ಲಿವಿಂಣ್ ಲಕ್ಷುರಿ ಹೋಮ್ಸ್: ಮಂಗಳೂರಿನ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕಾರಿಡಾರ್‍ಗಳಲ್ಲಿ ಒಂದಾದ ಕೊಟ್ಟಾರದ ಇನ್ಫೋಸಿಸ್ ಬಳಿ ರುದ್ರಾಕ್ಷ್ ಐಷಾರಾಮಿ ಅಪಾರ್ಟ್‍ಮೆಂಟ್ ಯೋಜನೆಯು ಜಾಗತಿಕ ಮಾನದಂಡಗಳೊಂದಿಗೆ ವಾಸ್ತು ಪ್ರಕಾರವಾಗಿ ಅತ್ಯಾಧುನಿಕವಾಗಿ ನಿರ್ಮಾಣಗೊಳ್ಳಲಿದೆ. ಗುಣಮಟ್ಟದ ಜೀವನ ಶೈಲಿಗೆ ಒಪ್ಪುವಂತೆ ವಿನ್ಯಾಸಗೊಳಿಸಲಾಗುತ್ತದೆ. ಇಲ್ಲಿನ ಮನೆಗಳಲ್ಲಿ ವಾಸ ಮಾಡುವವರಿಗೆ ಸುಖ, ಶಾಂತಿ, ನೆಮ್ಮದಿಯೊಂದಿಗೆ ಹೊಸ ಅನುಭವ ನೀಡಲಿದೆ.

ಸೌಲಭ್ಯ ಮತ್ತು ವಿನ್ಯಾಸ: ರುದ್ರಾಕ್ಷ್ ಅಪಾರ್ಟ್‍ಮೆಂಟ್ ನಿವಾಸಿಗಳ ದೈನಂದಿನ ಜೀವನ ಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ ಅತ್ಯಾಧುನಿಕ ಶ್ರೇಣಿಯ ಸೌಲಭ್ಯಗಳನ್ನು ಕಲ್ಪಿಸಲಿದೆ. ಇವುಗಳಲ್ಲಿ ಭವ್ಯವಾದ ಮೇಲ್ಛಾವಣಿಯ ಪ್ರವೇಶ ಲಾಬಿ, ಸಮುದಾಯ ಮತ್ತು ಮನರಂಜನಾ ಸ್ಥಳಗಳು, ಜಕುಝಿ ಮತ್ತು ಸೌನಾ ಮತ್ತು ನಗರ ಮತ್ತು ಕರಾವಳಿಯ ವಿಹಂಗಮ ನೋಟಗಳನ್ನು ಕಣ್ತುಂಬಿಕೊಳ್ಳಲು ಮೇಲ್ಛಾವಣಿಯ ವ್ಯವಸ್ಥೆಯನ್ನು ಒಳಗೊಂಡಿದೆ.

ಯೋಜನೆಯ ವಿಶೇಷತೆ: ರುದ್ರಾಕ್ಷ್ ಯೋಜನೆಯ ಪ್ರಮುಖ ವಿಶೇಷ, ಮಂಗಳೂರಿನ ಮೊಟ್ಟಮೊದಲ 24/7 ಕ್ಲೌಡ್ ಕಿಚನ್ ಅನ್ನು ವಸತಿ ಅಭಿವೃದ್ಧಿಯೊಳಗೆ ಪರಿಚಯಿಸಲಾಗಿದೆ, ಇದು ಮುಕುಂದ್ ರಿಯಾಲ್ಟಿಯ ನಾವೀನ್ಯತೆ ಮತ್ತು ಅನುಕೂಲತೆಗೆ ನಗರ ಜೀವನಶೈಲಿಗೆ ನೀಡಿರುವ ಆದ್ಯತೆಯನ್ನು ಪ್ರತಿಬಿಂಬಿಸುತ್ತದೆ. ರುದ್ರಾಕ್ಷ್ ಐಷಾರಾಮಿ ಮನೆಗಳಿರುವ ಸ್ಥಳವು ಐಟಿ ಹಬ್‍ಗಳು, ಶಿಕ್ಷಣ ಸಂಸ್ಥೆಗಳು, ಆರೋಗ್ಯ ಸೌಲಭ್ಯಗಳು, ಮಾರುಕಟ್ಟೆ ಸಹಿತ ವಿವಿಧ ಅಗತ್ಯತೆಗಳ ಕೇಂದ್ರಗಳು ಮತ್ತು ಪ್ರಮುಖ ರಸ್ತೆಗಳಿಗೆ ಅತ್ಯುತ್ತಮ ಸಂಪರ್ಕವನ್ನು ಕಲ್ಪಿಸುತ್ತದೆ. ಇದು ವೃತ್ತಿಪರರು ಮತ್ತು ಕುಟುಂಬಗಳಿಗೆ ತಮ್ಮ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಅನುಕೂಲವಾಗಲಿದೆ.

ಮುಕುಂದ್ ರಿಯಾಲ್ಟಿ: ಮುಕುಂದ್ ರಿಯಾಲ್ಟಿ ರಿಯಲ್ ಎಸ್ಟೇಟ್ ಅಭಿವೃದ್ಧಿ ಸಂಸ್ಥೆಯಾಗಿದ್ದು, ವಾಸ್ತುಶಿಲ್ಪದ ಗುಣಮಟ್ಟ, ಕ್ರಿಯಾತ್ಮಕ ಯೋಜನೆ ಮತ್ತು ಶಾಶ್ವತ ಮೌಲ್ಯವನ್ನು ಸಂಯೋಜಿಸುವ ಉತ್ತಮವಾಗಿ ವಿನ್ಯಾಸಗೊಳಿಸಿದ ವಸತಿ ಯೋಜನೆಗಳನ್ನು ಗ್ರಾಹಕರಿಗೆ ಕಲ್ಪಿಸಿ ಕೊಡುವಲ್ಲಿ ಮುಂಚೂಣಿಯಲ್ಲಿದೆ. ರುದ್ರಾಕ್ಷ್ ಬಿಡುಗಡೆಯೊಂದಿಗೆ, ಕಂಪನಿಯು ಮಂಗಳೂರಿನ ಪ್ರೀಮಿಯಂ ವಸತಿ ವಿಭಾಗದಲ್ಲಿ ತನ್ನ ಅಸ್ತಿತ್ವವನ್ನು ಇನ್ನಷ್ಟು ಭದ್ರಗೊಳಿಸಲಿದೆ. ಈ ಮೂಲಕ ಜವಾಬ್ದಾರಿಯುತ ಮತ್ತು ಮಹತ್ವಾಕಾಂಕ್ಷೆಯ ನಗರಾಭಿವೃದ್ಧಿಗೆ ತನ್ನ ಕೊಡುಗೆ ಯನ್ನು ಕಲ್ಪಿಸುವ ಆಶಯ ಹೊಂದಿದೆ.

“ಆರಾಮ, ಕ್ಷೇಮ ಮತ್ತು ದೀರ್ಘಾವಧಿಯ ಮೌಲ್ಯಕ್ಕೆ ಆದ್ಯತೆ ನೀಡುವ ಚಿಂತನಶೀಲ ಯೋಜಿತ ಬೆಳವಣಿಗೆಗಳಿಗೆ ಕಂಪನಿಯ ಬದ್ಧತೆಯನ್ನು ರುದ್ರಾಕ್ಷ್ ಯೋಜನೆ ಪ್ರತಿಬಿಂಬಿಸುತ್ತದೆ. ಅನುಕೂಲತೆ, ಸಂಪರ್ಕ ಮತ್ತು ಉನ್ನತ ಜೀವನಕ್ಕಾಗಿ ಬಯಸುವ ಮನೆ ಖರೀದಿದಾರರ ವಿಕಸನಗೊಳ್ಳುತ್ತಿರುವ ನಿರೀಕ್ಷೆಗಳನ್ನು ಪೂರೈಸಲು ರುದ್ರಾಕ್ಷ್‍ನ್ನು ವಿನ್ಯಾಸಗೊಳಿಸಲಾಗಿದೆ” ಎಂದು ಮುಕುಂದ್ ರಿಯಾಲ್ಟಿಯ ವ್ಯವಸ್ಥಾಪಕ ಪಾಲುದಾರ ಗುರುದತ್ತ ಶೆಣೈ ತಿಳಿಸಿದರು.






















Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News