×
Ad

ಮಂಗಳೂರು: ಗ್ಯಾರಂಟಿ ಯೋಜನೆ ಪರಿಶೀಲನಾ ಸಭೆ

Update: 2026-01-29 19:42 IST

ಮಂಗಳೂರು,ಜ.29: ಮಂಗಳೂರು ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿಯ ಸಭೆಯು ಅಧ್ಯಕ್ಷ ಸುರೇಂದ್ರ ಕಂಬಳಿ ಅವರ ಅಧ್ಯಕ್ಷತೆಯಲ್ಲಿ ಗುರುವಾರ ಮಂಗಳೂರು ತಾಪಂ ಸಭಾಂಗಣದಲ್ಲಿ ನಡೆಯಿತು.

2025ರ ಅಕ್ಟೋಬರ್ ತಿಂಗಳ ಗೃಹಲಕ್ಷ್ಮಿ ಯೋಜನೆಯ ಸಹಾಯಧನ ಬಿಡುಗಡೆಯಾಗಿದ್ದು, ಶೀಘ್ರದಲ್ಲಿ ಫಲಾನುಭವಿ ಗಳ ಖಾತೆಗೆ ಜಮೆ ಆಗಲಿದೆ ಎಂದು ಶಿಶು ಅಭಿವೃದ್ದಿ ಯೋಜನಾಧಿಕಾರಿ ಶ್ವೇತಾ ತಿಳಿಸಿದರು.

ಉಳಾಯಿಬೆಟ್ಟು ಸಂಕಮಾಡು ಮಾರ್ಗವಾಗಿ ಹೊಸ ಕೆಎಸ್ಸಾರ್ಟಿಸಿ ಬಸ್ ಮಂಜೂರಾಗಿದ್ದು, ಶೀಘ್ರ ಪ್ರಾರಂಭಿಸು ವಂತೆ ಸಮಿತಿಯ ಸದಸ್ಯ ನವಾಝ್ ಒತ್ತಾಯಿಸಿದರು. ಇದಕ್ಕೆ ಕೆಎಸ್ಸಾರ್ಟಿಸಿ ಅಧಿಕಾರಿ ಸಕರಾತ್ಮಕವಾಗಿ ಸ್ಪಂದಿಸಿದರು.

ಸಭೆಯಲ್ಲಿ ತಾಪಂ ಇಒ ಮಹೇಶ್ ಕುಮಾರ್ ಹೊಳ್ಳ, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಟಾನ ಸಮಿತಿ ಸದಸ್ಯ ಅಲ್‌ಸ್ಟನ್ ಡಿಕುನ್ಹ, ತಾಲೂಕು ಸಮಿತಿ ಸದಸ್ಯರಾದ ಪ್ರಶಾಂತ್ ಎಸ್, ಶೈಲಾ ನೀತಾ ಡಿಸೋಜ, ರಾಜೇಶ್ ಶೆಟ್ಟಿ , ರಿತೇಶ್ ಅಂಚನ್, ವಿದ್ಯಾ, ಶ್ರೀಧರ ಪಂಜ, ಡಿ.ಎಂ.ಮುಸ್ತಫಾ ಹಾಗೂ ತಾಪಂ ಯೋಜನಾಧಿಕಾರಿ ಸುಕನ್ಯ, ವಿಷಯ ನಿರ್ವಾಹಕ ಹಾರಿಸ್, ತಾಲೂಕು ಐಇಸಿ ಸಂಯೋಜಕಿ ನಿಶ್ಮಿತಾ ಬಿ. ಮತ್ತು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News