×
Ad

ಬೈಕ್ -ಸ್ಕೂಟರ್ ಮಧ್ಯೆ ಅಪಘಾತ: ಓರ್ವ ಮೃತ್ಯು, ಇಬ್ಬರಿಗೆ ಗಾಯ

Update: 2026-03-09 21:02 IST

ಕಾಪು: ಕಾಪು ಎ1 ಹೋಟೆಲ್ ಜಂಕ್ಷನ್ ಬಳಿ ಬೈಕ್ ಹಾಗೂ ಸ್ಕೂಟರ್ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಓರ್ವ ಸವಾರ ಮೃತಪಟ್ಟ ಬಗ್ಗೆ ವರದಿಯಾಗಿದೆ.

ಮೃತರನ್ನು ಎಲ್ಲೂರು ಗ್ರಾಮದ ಅದಮಾರು ಕಾಲೇಜು ಬಳಿ ನಿವಾಸಿ ಜಯಂತ್ ಎಂಬವರ ಮಗ ಸೂರಜ್(23) ಎಂದು ಗುರುತಿಸಲಾಗಿದೆ. ಬೈಕ್‌ನ ಹಿಂಬದಿ ಸವಾರ ಆದೀಶ್ ಹಾಗೂ ಸ್ಕೂಟರ್ ಸವಾರ ಉಮೇಶ್ ಎಂಬವರು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪಡುಬಿದ್ರೆಯ ಸುಜಲಾನ್ ಕಂಪನಿಯಲ್ಲಿ ಸೂಪರ್ ವೈಸರ್ ಆಗಿ ಕೆಲಸ ಮಾಡಿಕೊಂಡಿದ್ದ ಸೂರಜ್, ಮಾ.8ರಂದು ರಾತ್ರಿ ಕೆಲಸ ಮುಹಿಸಿ ಕಟಪಾಡಿಗೆ ಹೋಗಿದ್ದು, ವಾಪಸ್ಸು ಬೈಕ್‌ನಲ್ಲಿ ಆದೀಶ್ ಎಂಬವರನ್ನು ಕೂರಿಸಿಕೊಂಡು ಬರುತ್ತಿದ್ದಾಗ ವಿರುದ್ಧ ದಿಕ್ಕಿನಲ್ಲಿ ಬಂದ ಸ್ಕೂಟರ್ ಢಿಕ್ಕಿ ಹೊಡೆಯತ್ತೆನ್ನಲಾಗಿದೆ. ಇದರಿಂದ ಮೂವರು ಸವಾರರು ರಸ್ತೆಗೆ ಬಿದ್ದು ಗಾಯಗೊಂಡರು.

ಇದರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸೂರಜ್ ಅವರ ಬ್ರೈನ್ ಡೆಡ್ ಆಗಿದ್ದು, ಮಾ.9ರಂದು ಬೆಳಗ್ಗೆ ಅವರು ಚಿಕಿತ್ಸೆ ಫಲಕಾರಿಯಾಗದೆ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟರೆಂದು ತಿಳಿದುಬಂದಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News