×
Ad

ಫೆ. 10-11: ಸಮಸ್ತ ಮುಸಾಬಖ ಕರ್ನಾಟಕ ರಾಜ್ಯಮಟ್ಟದ ಇಸ್ಲಾಮಿಕ ಕಲಾ ಸಾಹಿತ್ಯ ಸ್ಪರ್ಧೆ

Update: 2024-02-09 19:44 IST

ಮಂಗಳೂರು: ಸಮಸ್ತ ಕೇರಳ ಜಂಇಯ್ಯತುಲ್ ಮುಅಲ್ಲಿಮೀನ್ ಸೆಂಟ್ರಲ್ ಕೌನ್ಸಿಲ್ ಅಧೀನದಲ್ಲಿ ಸಮಸ್ತ ಅಂಗೀಕೃತ ಮದರಸ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗಾಗಿ ನಡೆಸಲಾಗುವ ಇಸ್ಲಾಮಿಕ್ ಕಲಾ ಸಾಂಸ್ಕೃತಿಕ ಸ್ಪರ್ಧೆ ಫೆ. 10 ಮತು 11 ರಂದು ನಡೆಯಲಿದೆ.

ಪುತ್ತೂರು ನಗರದ ಪರ್ಲಡ್ಕ ಹಯಾತುಲ್ ಇಸ್ಲಾಂ ಮದರಸ ವಠಾರದಲ್ಲಿ ಈ ಸಮಸ್ತ ಮುಸಾಬಖ ಕರ್ನಾಟಕ ರಾಜ್ಯಮಟ್ಟದ ಸ್ಪರ್ಧೆ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಮಸಾಬಖ ಸ್ವಾಗತ ಸಮಿತಿಯ ಕನ್ದೀನರ್ ಮುಫತ್ತಿಶ್ ಉಮರ್ ದಾರಿಮಿ ಸಾಲ್ಮರ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

10ರಂದು ಬೆಳಿಗ್ಗೆ 8ಕ್ಕೆ ಪುತ್ತೂರು ತಾಲೂಕು ಸಮಸ್ತ ಜಂಇಯ್ಯತುಲ್ ಉಲಮಾ ಅಧ್ಯಕ್ಷರಾದ ಸಯ್ಯದ್ ಅಹ್ಮದ್ ಪೂಕೋಯ ತಂಳ್‌ರವರ ನೇತೃತ್ವದಲ್ಲಿ ಪುತ್ತೂರು ಮರ್‌ಹೂಂ ಸಯ್ಯದ್ ಮುಹಮ್ಮದ್ ತಂಜಳ್ ರವರ ಮಖ್ಬರ ಝಿಯಾರತಿನೊಂದಿಗೆ ಕಾರ್ಯಕ್ರಮ ಪ್ರಾರಂಭವಾಗಲಿದೆ. ಪರ್ಲಡ್ಕ ಶಂಸುಲ್ ಉಲಮಾ ನಗರ ತನಕ ಎಸ್ಕೆಎಸ್‌ಬಿವಿ ವಿದ್ಯಾರ್ಥಿಗಳ ಕಾಲ್ನಡಿಗೆ ಜಾಥಾ ನಡೆಯಲಿದೆ.

ಬೆಳಿಗ್ಗೆ 9:30ಕ್ಕೆ ಪರ್ಲಡ್ಕ ಜುಮ್ಮಾ ಮಸೀದಿ ವಠಾರದಲ್ಲಿ ಜಮಾಅತ್ ಅಧ್ಯಕ್ಷರಾದ ಅಬ್ದುಲ್ ರಜಾಕ್ ಹಾಜಿಯವರು ಧ್ವಜಾರೋಹಣ ನಿರ್ವಹಿಸಲಿದ್ದಾರೆ. ಪರ್ಲಡ್ಕ ಜುಮಾ ಮಸೀದಿ ಖತೀಬರಾದ ಅಬ್ದುಲ್ ರಶೀದ್ ರಹ್ಮಾನಿ ಶಂಸುಲ್ ಉಲಮಾ ಮೌಲಿದ್ ಮಜ್ಲಿಸ್‌ಗೆ ನೇತೃತ್ವ ನೀಡಲಿದ್ದಾರೆ. 10ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, 11ಕ್ಕೆ ವಿದ್ಯಾರ್ಥಿಗಳ ಕಲಾ ಸಾಂಸ್ಕೃತಿಕ ಸ್ಪರ್ಧೆ ಪ್ರಾರಂಭವಾಗಲಿದೆ. ಶನಿವಾರ ರಾತ್ರಿ 10 ರವರೆಗೆ ರವಿವಾರ ಬೆಳಿಗ್ಗೆ 8ರಿಂದ ಮಧ್ಯಾಹ್ನ 1 ರ ತನಕ ಜೂನಿಯರ್ ಸೀನಿಯರ್ ಸೂಪರ್ ಸೀನಿಯರ್, ಜನರಲ್, ಅಲುಮ್ಮಿ, ಮುಅಲ್ಲಿಂ, ಗರ್ಲ್ಸ್ ವಿಭಾಗ ಸೇರಿ 67 ವಿಷಯಗಳಲ್ಲಿ ಆರು ವೇದಿಕೆಗಳಲ್ಲಿ ಒಂದು ಸಾವಿರದಷ್ಟು ಪ್ರತಿಭೆಗಳು ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಲಿದ್ದಾರೆ.

11 ರಂದು ಆದಿತ್ಯವಾರ ಮಧ್ಯಾಹ್ನ 1 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು ವಿವಿಧ ಧಾರ್ಮಿಕ, ಸಾಮಾಜಿಕ, ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ ಎಂದು ಅವರು ವಿವರಿಸಿದರು.

ಮದರಸ, ರೇಂಜ್, ಜಿಲ್ಲಾ ಹಂತದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿದವರು ಮಾತ್ರ ರಾಜ್ಯಮಟ್ಟದ ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ ಎಂದು ಅವರು ವಿವರಿಸಿದರು.

ಕೇರಳ, ತಮಿಳುನಾಡು ರಾಜ್ಯಗಳಲ್ಲಿ ಈಗಾಗಲೇ ರಾಜ್ಯಮಟ್ಟದ ಮುಸಾಬಖಗಳು ನಡೆದಿದ್ದು ಕರ್ನಾಟಕ ರಾಜ್ಯದಂತೆ ಅಸ್ಸಾಂ, ಬಿಹಾರ, ಆಂಧ್ರ ಪ್ರದೇಶ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಜಾರ್ಖಂಡ್, ರಾಜಸ್ಥಾನ ಮಹಾರಾಷ್ಟ್ರ, ಕಾಶ್ಮೀರೊದಲಾದ ರಾಜ್ಯಗಳ ಸಮಸ್ತದ ಮದರಸಗಳನ್ನು ಕೇಂದ್ರೀಕರಿಸಿ ವಿವಿಧ ರಾಜ್ಯ ಮಟ್ಟದ ಮುಸಾಬಖಗಳು ನಡೆಯುತ್ತಿದೆ. ಗ್ರಾಂಡ್ ಫಿನಾಲೆಯಾಗಿ ರಾಷ್ಟ್ರೀಯ ಮಟ್ಟದ ಮುಸಾಬಖ ಏಪ್ರಿಲ್ 27 ಮತ್ತು 28 ರಂದು ಮುಂಬೈನಲ್ಲಿ ನಡೆಯಲಿದೆ ಎಂದು ಅಬ್ದುಲ್ ಸಮದ್ ಹುದವಿ ಚೋಕ್ಕಬೆಟ್ಟು ತಿಳಿಸಿದರು.

ಗೋಷ್ಠಿಯಲ್ಲಿ ಸ್ವಾಗತ ಸಮಿತಿಯ ಕಾರ್ಯನಿರ್ವಾಹಕ ಅಧ್ಯಕ್ಷ ಅಬ್ದುಲ್ ರಶೀದ್ ಹಾಜಿ ಪರ್ಲಡ್ಕ, ಹಾಜಿ ಮುಹಮ್ಮದ್ ಹನೀಫ್ ಮುಸ್ಲಿಯಾರ್ ಮಿತ್ತಬೈಲ್, ಪರ್ಲಡ್ಕ ಜುಮಾ ಮಸೀದಿ ಕಾರ್ಯದರ್ಶಿ ಸಮೀರ್ ಸ್ಕೆಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News