ಲರ್ನ್ ದಿ ಕುರ್‌ಆನ್ 12ನೇ ಹಂತದ ಪಬ್ಲಿಕ್ ಪರೀಕ್ಷಾ ಫಲಿತಾಂಶ ಪ್ರಕಟ
ಮಂಗಳೂರು, ಡಿ.4: ಸೌತ್ ಕರ್ನಾಟಕ ಸಲಫಿ ಮೂವ್‌ಮೆಂಟ್ ಇದರ ಅಧೀನ ಸಂಸ್ಥೆಗಳಾದ ಸಲಫಿ ಎಜುಕೇಶನ್ ಬೋರ್ಡ್, ಸಲಫಿ ಗರ್ಲ್ಸ್ ಮೂವ್‌ಮೆಂಟ್, ಕರ್ನಾಟಕ ಸಲಫಿ ಫೌಂಡೇಶನ್ ರಿಯಾದ್ ಮತ್ತು ಮುಜಾಹಿದ್ ಗರ್ಲ್ಸ್ ಮೂವ್‌ಮೆಂಟ್ ರಿಯಾದ್ ಇವುಗಳ ಜಂಟಿ ಆಶ್ರಯದಲ್ಲಿ ನಡೆದ 12ನೇ ಹಂತದ ಲರ್ನ್ ದಿ ಕುರ್‌ಆನ್ ಪಬ್ಲಿಕ್ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ.
ಕನ್ನಡ ವಿಭಾಗದಲ್ಲಿ ತಸ್ನೀಮಾ (ಪ್ರಥಮ), ಆಯಿಶಾ (ದ್ವಿತೀಯ), ಆಶೂರ (ತೃತೀಯ) ಸ್ಥಾನ ಪಡೆದಿದ್ದಾರೆ. ಇಂಗ್ಲಿಷ್ ವಿಭಾಗದಲ್ಲಿ ನಫೀಸಾ ಹಿಬಾ (ಪ್ರಥಮ), ಮುಂಝಿರಾ (ದ್ವಿತೀಯ), ಖದೀಜಾ ಅಶ್ಯಮ್ (ತೃತೀಯ) ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿ ವಿಭಾಗದಲ್ಲಿ ಮರ್ಯಮ್ (ಪ್ರಥಮ), ಆಯಿಶಾ ಹನಾನ (ದ್ವಿತೀಯ), ಲಾಮಿಯ (ತೃತೀಯ) ಸ್ಥಾನ ಪಡೆದಿದ್ದಾರೆ.
ಕನ್ನಡ ಹಾಗೂ ಇಂಗ್ಲಿಷ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಇಬ್ಬರಿಗೆ ಉಚಿತ ಉಮ್ರಾ ಪ್ರಯಾಣ ಹಾಗೂ ಉಳಿದ ವಿಜೇತರಿಗೆ ಚಿನ್ನದ ನಾಣ್ಯಗಳನ್ನು ನೀಡಲಾಗುವುದು. 14 ಮಂದಿಗೆ ಪ್ರೋತ್ಸಾಹ ಬಹುಮಾನವನ್ನು ನೀಡಲಾಗುವುದು ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.