ಸೆ. 14 ರಂದು ರಾಕ್ಣೊ ಸಾಹಿತ್ಯ ಪ್ರಶಸ್ತಿ ಪ್ರದಾನ
ಮಂಗಳೂರು: ಮಂಗಳೂರು ಮೂಲದ ಕೊಂಕಣಿ- ಇಂಗ್ಲಿಷ್ ದ್ವಿಭಾಷಾ ವಾರ ಪತ್ರಿಕೆ ರಾಕ್ಣೊ ತನ್ನ ವಾರ್ಷಿಕ ಸಾಹಿತ್ಯ ಪ್ರಶಸ್ತಿಯನ್ನು ಪ್ರಕಟಿಸಿದೆ. ವರ್ಷದ ಅತ್ಯುತ್ತಮ ಲೇಖಕ ಪ್ರಶಸ್ತಿಗೆ ರಿಚಾರ್ಡ್ ಅಲ್ವಾರಿಸ್ ಕುಲಶೇಖರ ಆಯ್ಕೆಯಾಗಿದ್ದಾರೆ. ವರ್ಷದ ಅತ್ಯುತ್ತಮ ಧರ್ಮ ಕೇಂದ್ರದ ಪತ್ರಿಕೆ ಪ್ರಶಸ್ತಿಯು ಬಿಜೈ ಚರ್ಚ್ ನ 'ಇಜಯ್ಚೊ ಕಳೊ' ಪತ್ರಿಕೆಗೆ ಲಭಿಸಿದೆ.
ಪ್ರಶಸ್ತಿಗಳನ್ನು ಸೆ. 14 ರಂದು ಬಜಪೆ ಧರ್ಮ ಕೇಂದ್ರದ ಸಭಾಂಗಣದಲ್ಲಿ ಬೆಳಗ್ಗೆ 10 ಗಂಟೆಗೆ ನಡೆಯುವ ಸಮಾರಂಭದಲ್ಲಿ ಧರ್ಮ ಪ್ರಾಂತ್ಯದ ಬಿಷಪ್ ಅತಿ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ದಾನ್ಹಾ ಅವರು ಪ್ರದಾನ ಮಾಡುವರು.
ರಾಕ್ಣೊ ಪ್ರಕಾಶನ ಪ್ರಕಟಿಸಿದ 134ನೇ ಪುಸ್ತಕ 'ಭರ್ವಶಾಚ್ಯೆ ವಾಟೆರ್' ಕೃತಿಯನ್ನು ಬಿಷಪ್ ಬಿಡುಗಡೆ ಮಾಡಲಿ ದ್ದಾರೆ. ಬಳಿಕ 'ಡಿಜಿಟಲ್ ಯುಗದಲ್ಲಿ ಕೊಂಕಣಿ ಸಾಹಿತ್ಯದ ಅಗತ್ಯತೆ ಮತ್ತು ಜನರಲ್ಲಿ ಓದುವ ಅಭ್ಯಾಸ' ಎಂಬ ವಿಚಾರಗೋಷ್ಠಿ ನಡೆಯಲಿದೆ ಎಂದು ರಾಕ್ಣೊ ಪತ್ರಿಕೆಯ ಸಂಪಾದಕ ಫಾ. ರೂಪೇಶ್ ಮಾಡ್ತಾ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.