×
Ad

ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ 175 ನೇ ವಾರ್ಷಿಕೋತ್ಸವ: ಮಂಗಳೂರಿನಲ್ಲಿ ವಾಕಥಾನ್

Update: 2025-03-02 23:13 IST

ಮಂಗಳೂರು: ಭಾರತದ ಭೂವೈಜ್ಞಾನಿಕ ಸಮೀಕ್ಷೆಯ (ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ) 175 ನೇ ವಾರ್ಷಿಕೋತ್ಸವ ಮತ್ತು ರಾಷ್ಟ್ರಕ್ಕೆ ಅದರ ಮಹತ್ವದ ಕೊಡುಗೆಗಳನ್ನು ಸ್ಮರಿಸಲು ಮಂಗಳೂರಿನ ಜಿಎಸ್‌ಐ ಸಾಗರ ಕರಾವಳಿ ಸಮೀಕ್ಷಾ ವಿಭಾಗ (ಎಂ ಆ್ಯಂಡ್ ಸಿಎಸ್‌ಡಿ) ರವಿವಾರ ಮಂಗಳೂರಿನಲ್ಲಿ ವಾಕಥಾನ್ ಅನ್ನು ಆಯೋಜಿಸಿತ್ತು.

ಸುರಕ್ಷಿತ ಜಗತ್ತಿಗೆ ಭೂವಿಜ್ಞಾನ ಎಂಬ ವಿಷಯದ ಅಡಿಯಲ್ಲಿ ವಾಕಥಾನ್‌ನ್ನು ಅನ್ನು ಆಯೋಜಿಸಲಾಗಿತ್ತು.

ವಾಕಥಾನ್ ಕಾರ್ಯಕ್ರಮವನ್ನು ಮನಪಾ ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಮಂಗಳೂರು ನಗರದ ಉಪ ಪೊಲೀಸ್ ಆಯುಕ್ತ ಸಿದ್ಧಾರ್ಥ್ ಗೋಯಲ್, ನಿರ್ದೇಶಕರಾದ ಆಂಜನೇ ಯುಲು ಕಟಾರಿ ಮತ್ತು ಡಾ. ಸಿ.ವಿ. ಗೋಪಾಲನ್ ಮುಂತಾದವರ ಭಾಗವಹಿಸಿದ್ದರು.

ವಾಕಥಾನ್‌ನಲ್ಲಿ ಎಂಸಿಎಸ್‌ಡಿ ನಿರ್ದೇಶಕ ಶರತ್ ಎಲ್‌ಜಿ , ಸ್ಥಳೀಯ ಪೊಲೀಸ್ ಅಧಿಕಾರಿಗಳು, ಅಧಿಕಾರಿಗಳು, ಸಿಬ್ಬಂದಿ ಸದಸ್ಯರು, ಅವರ ಕುಟುಂಬಗಳು, ಮಕ್ಕಳು, ಕಾಲೇಜು ವಿದ್ಯಾರ್ಥಿಗಳು ಮತ್ತು ಎಲ್ಲಾ ವಯೋಮಾನದ ಸಾರ್ವಜನಿಕರು ಸೇರಿದಂತೆ 160 ಮಂದಿ ಭಾಗವಹಿಸಿದ್ದರು.

ಮಂಗಳೂರಿನ ಎಂಸಿಎಸ್‌ಡಿ, ಜಿಎಸ್‌ಐನ ಮುಖ್ಯಸ್ಥ ಡಾ. ಎಂ.ಎನ್. ಶರೀಫ್ ಸ್ವಾಗತಿಸಿ, ವಂದಿಸಿದರು. 




 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News