×
Ad

ಮಂಗಳೂರು: ಫೆ.18ರಂದು ಹಜ್ ತರಬೇತಿ ಶಿಬಿರ

Update: 2025-02-08 20:00 IST

ಮಂಗಳೂರು, ಫೆ.8: ಹಜ್ ಕಮಿಟಿ ಆಫ್ ಇಂಡಿಯಾ ಮೂಲಕ ಪವಿತ್ರ ಹಜ್ ಯಾತ್ರೆ ಕೈಗೊಳ್ಳುವವರಿಗೆ ಹಜ್ ತರಬೇತಿ ಶಿಬಿರ ಫೆ.18ರಂದು ಬೆಳಗ್ಗೆ 9:30ರಿಂದ ಎಕ್ಕೂರಿನ ಇಂಡಿಯಾನ ಕನ್ವೆನ್ಶನ್ ಸೆಂಟರ್‌ನಲ್ಲಿ ನಡೆಯಲಿದೆ.

ರಾಜ್ಯ ಹಜ್ ಸಮಿತಿ ಸದಸ್ಯ ಸಯ್ಯಿದ್ ಆದೂರು ತಂಙಳ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ದೇವರ್‌ಶೋಲ ಅಬ್ದುಸ್ಸಲಾಮ್ ಮುಸ್ಲಿಯಾರ್ ಮತ್ತು ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು ಹಜ್ ಬಗ್ಗೆ ಕಾರ್ಯಾಗಾರವನ್ನು ನಡೆಸಿಕೊಡಲಿರುವರು.

ಈ ಕಾರ್ಯಕ್ರಮದಲ್ಲಿ ಹಜ್ ಕಮಿಟಿ ಸದಸ್ಯರು, ಅಧಿಕಾರಿಗಳು ಭಾಗವಹಿಸಲಿದ್ದಾರೆ. ಹಜ್ ಯಾತ್ರೆಗೆ ಈಗಾಗಲೇ ಆಯ್ಕೆಯಾಗಿ ಹಣ ಪಾವತಿಸಿದವರು ಒಂದು ವೇಳೆ ಈ ತನಕ ಪಾಸ್‌ಪೋರ್ಟ್ ಪ್ರತಿಯನ್ನು ರಾಜ್ಯ ಸಮಿತಿಗೆ ಸಲ್ಲಿಸದ ಯಾತ್ರಿಕರಿಗೆ ಹಜ್ ಕಾರ್ಯಾಗಾರದಲ್ಲಿ ಪಾಸ್‌ಪೋರ್ಟ್ ಪ್ರತಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಪಾಸ್‌ಪೋರ್ಟ್‌ನ ಎರಡು ಪ್ರತಿ ಮತ್ತು ಎರಡು ಭಾವಚಿತ್ರಗಳನ್ನು ಹಜ್ ಅಧಿಕಾರಿಗಳಿಗೆ ಸಲ್ಲಿಸಬಹುದಾಗಿದೆ.

ಹೆಚ್ಚಿನ ವಿವರಗಳಿಗೆ ಮೊಬೈಲ್ ನಂಬ್ರ 9741770138 ನ್ನು ಸಂಪರ್ಕಿಸುವಂತೆ ರಾಜ್ಯ ಹಜ್ ಸಮಿತಿ ಸದಸ್ಯ ಸಯ್ಯಿದ್ ಆದೂರು ತಂಙಳ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News