ಲೋಕ ಅದಾಲತ್: ದ.ಕ. ಜಿಲ್ಲೆಯಲ್ಲಿ 43055 ಪ್ರಕರಣಗಳು ಇತ್ಯರ್ಥ
Update: 2025-03-10 20:29 IST
ಮಂಗಳೂರು, ಮಾ.10: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾರ್ಚ್ 8 ರಂದು ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ನ್ಯಾಯಾಲಯದಲ್ಲಿ ಬಾಕಿ ಇದ್ದ ಪ್ರಕರಣಗಳ ಪೈಕಿ 5291 ಪ್ರಕರಣಗಳು ಇತ್ಯರ್ಥ ವಾಗಿರುತ್ತದೆ ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳ ಪೈಕಿ 43055 ಪ್ರಕರಣಗಳು ಇತ್ಯರ್ಥವಾಗಿರುತ್ತದೆ.
ಕೌಟುಂಬಿಕ ನ್ಯಾಯಾಲಯದಲ್ಲಿ 2 ಪ್ರಕರಣಗಳಲ್ಲಿ ದಂಪತಿಗಳು ಒಂದಾಗಿದ್ದಾರೆ.
ದಕ್ಷಿಣಕನ್ನಡ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಬಾಕಿ ಇದ್ದ ಮೋಟಾರು ವಾಹನ ವಿಮಾ ಪ್ರಕರಣದಲ್ಲಿ ಒಂದು ಪ್ರಕರಣವು ರೂ.95 ಲಕ್ಷಗಳಿಗೆ ಇತ್ಯರ್ಥವಾಗಿರುತ್ತದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶೋಭ ಬಿ.ಜಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.