×
Ad

ಮುಡಿಪು ನವೋದಯ ವಿದ್ಯಾಲಯಕ್ಕೆ 5 ಸ್ಟಾರ್ ಮಾನ್ಯತಾ ಪ್ರಶಸ್ತಿ ಪ್ರದಾನ

Update: 2025-06-22 18:38 IST

ಕೊಣಾಜೆ: ಮುಡಿಪಿವಿನ ಪಿಎಂ ಶ್ರೀ ಜವಾಹರಲಾಲ್ ನವೋದಯ ವಿದ್ಯಾಲಯವು ಸರ್ಕಾರದ 5 ಸ್ಟಾರ್ ಮಾನ್ಯತೆಗೆ ಭಾಜನವಾಗಿದ್ದು,‌ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ‌ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡುರಾವ್ ಅವರಿಂದ 5 ಸ್ಟಾರ್ ಮಾನ್ಯತಾ ಪ್ರಶಸ್ತಿಯನ್ನು ಮುಡಿಪು ನವೋದಯ ವಿದ್ಯಾಲಯದ ಪ್ರಾಂಶುಪಾಲರಾದ ರಾಜೇಶ್ ಪಿ ಅವರು ಸ್ವೀಕರಿಸಿದರು.‌

ಈ ಸಂದರ್ಭದಲ್ಲಿ ಗೃಹ ಕೌನ್ಸಿಲ್ ಸಿಇಒ ಸಂಜಯ್, ಡೆಪ್ಯೂಟಿ ಸಿಇಒ ಸಬ್ನಮ್ ಬಸ್ಸಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ 5 ಸ್ಟಾರ್ ಮಾನ್ಯತೆಯು ಶಿಕ್ಷ‌ಣ ಸಂಸ್ಥೆಯ ಶೈಕ್ಣಣಿಕ ಕಾರ್ಯಚಟುವಟಿಕೆಗಳು, ಸಾಧನೆಗಳು, ಮೂಲಭೂತ ಸೌಲ್ಯಭ್ಯಗಳು,‌ ಸುಸ್ಥಿರ ಅಭಿವೃದ್ಧಿ ಸೇರಿದಂತೆ ಎಲ್ಲಾ ವಿಭಾಗಗಳ‌ ಮಾನದಂಡಗಳನ್ನು ಆಧರಿಸಿ ನೀಡಲಾಗುತ್ತದೆ. ದ.ಕ‌.ಜಿಲ್ಲೆಯಲ್ಲಿ 5ಸ್ಟಾರ್ ಮಾನ್ಯತೆ ‌ಪಡೆದ ಮೊದಲ ಶಿಕ್ಷಣ ಸಂಸ್ಥೆಯಾಗಿ‌ ಗುರುತಿಸಿರುವುದಕ್ಕೆ‌ ಜಿಲ್ಲಾಧಿಕಾರಿ ಹಾಗೂ ಮುಡಿಪು ನವೋದಯ ವಿದ್ಯಾಲಯಯದ ಅಧ್ಯಕ್ಷರೂ ಆಗಿರುವ ದರ್ಶನ್ ಅವರು ಶಿಕ್ಷಣ ಸಂಸ್ಥೆಯ ಸಾಧನೆಗೆ ಪ್ರಾಂಶುಪಾಲರಾದ ರಾಜೇಶ್ ಪಿ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ.

ಶಿಕ್ಷಣ 5 ಸ್ಟಾರ್ ಮಾನ್ಯತೆಯ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರಾಂಶುಪಾಲರಾದ ರಾಜೇಶ್ ಪಿ.ಅವರು ವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಪರಿಶ್ರಮದ ಫಲವಾಗಿ ಈ ಅತ್ಯುನ್ನತ ಮಾನ್ಯತೆಯು ನಮ್ಮ ಸಂಸ್ಥೆಗೆ ಪ್ರಾಪ್ತವಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News