×
Ad

ಬೆಳ್ತಂಗಡಿ| ಜೂ.7ರಿಂದ ಗಡಾಯಿಕಲ್ಲು, ಜಲಪಾತಗಳಿಗೆ ಪ್ರವಾಸಿಗರಿಗೆ ಪ್ರವೇಶಕ್ಕೆ ಅನುಮತಿ

Update: 2025-06-06 22:48 IST

ಗಡಾಯಿಕಲ್ಲು

ಬೆಳ್ತಂಗಡಿ : ಗಡಾಯಿಕಲ್ಲು (ಜಮಲಾಬಾದ್ ಗಡ) ಕಡಮಗುಂಡಿ, ಬೊಳ್ಳೆ ಜಲಪಾತ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಗೆ ಜೂ.7ರಿಂದ ಎಂದಿನಂತೆ ಪ್ರವೇಶ ಮಾಡಲು ಅನುಮತಿ ನೀಡಲಾಗಿದೆ ಎಂದು ಬೆಳ್ತಂಗಡಿ ವಲಯ ವನ್ಯಜೀವಿ ವಿಭಾಗದಿಂದ ಅಧಿಕೃತವಾಗಿ ಮಾಹಿತಿ ಲಭ್ಯವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದುದರಿಂದ ಹವಾಮಾನ ಇಲಾಖೆಯ ಮುನ್ಸೂಚನೆ ಯಂತೆ ರೆಡ್ ಅಲರ್ಟ್ ಘೋಷಣೆಯಾಗಿತ್ತು. ನದಿ ಹಳ್ಳಗಳು ಉಕ್ಕಿ ಹರಿದು ಒಳ ಹರಿವು ಜಾಸ್ತಿ ಇದ್ದುದ ರಿಂದ ಪ್ರವಾಸಿಗರ ಚಾರಣಕ್ಕೆ ಮೇ 31ರಂದು ಮುಂದಿನ ಆದೇಶದವರೆಗೆ ಪ್ರವೇಶವನ್ನು ನಿಷೇಧ ಮಾಡಿ ಆದೇಶ ಮಾಡಿದ್ದರು. ಇದೀಗ ಜೂ.7ರಿಂದ ಬೆಳ್ತಂಗಡಿಯ ಗಡಾಯಿಕಲ್ಲು, ಕಡಮಗುಂಡಿ, ಬೊಳ್ಳೆ ಜಲಪಾತ ಪ್ರವಾಸಿ ತಾಣಗಳಲ್ಲಿ ಮಳೆ ಕಡಿಮೆಯಾದ ಕಾರಣದಿಂದ ನಾಳೆ ಶನಿವಾರ ಜೂ.7ರಿಂದ ಪ್ರವಾಸಿಗರಿಗೆ ಎಂದಿನಂತೆ ಪ್ರವೇಶಿಸಲು ವನ್ಯಜೀವಿ ವಿಭಾಗದ ಬೆಳ್ತಂಗಡಿ ವಲಯದಿಂದ ಅನುಮತಿ ನೀಡಲಾಗಿದೆ‌.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News