×
Ad

ಆ.15ರಂದು ಕುಂಪಲದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಕುಂಪಲಾಷ್ಟಮಿ ಉತ್ಸವ

Update: 2025-08-12 18:25 IST

ಮಂಗಳೂರು: ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ಆಶ್ರಯದಲ್ಲಿ ಆ.15 ರಂದು 28 ನೇ ವರ್ಷದ ಕುಂಪಲಾಷ್ಟಮಿ ಉತ್ಸವ ವಿವಿದ ಧಾರ್ಮಿಕ, ಭಜನೆ, ಸಾಂಸ್ಕೃತಿಕ ಮತ್ತು ಆಕರ್ಷಕ ಶೋಭಯಾತ್ರೆಯೊಂದಿಗೆ ನಡೆಯಲಿದೆ ಎಂದು ಮಂದಿರದ ಸಂಘಟನಾ ಕಾರ್ಯದರ್ಶಿ ಪ್ರವೀಣ್ ಎಸ್ ಕುಂಪಲ ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ವಿವರಿಸಿದರು.

ಕುಂಪಲಾಷ್ಟಮಿ ಉತ್ಸವದ ಪ್ರಯುಕ್ತ ವಿವಿದ ಸ್ಪರ್ಧೆಗಳು ಈಗಾಗಲೆ ನಡೆದಿದ್ದು, ಆಗಸ್ಟ್ 15 ರಂದು ಬೆಳಗ್ಗೆ ಸ್ಥಳ ಶುದ್ದಿ, ಗಣಹೋಮ, ಬೆ.8 ಕ್ಕೆ ಹನುಮಾನ್ ನಗರ ವೀರಾಂಜನೇಯ ವ್ಯಾಯಾಮ ಶಾಲೆಯಿಂದ ಮಂಗಳ ಕಲಶದ ಮೆರವಣಿಗೆ, ಕೃಷ್ಣ ಜನ್ಮಾಷ್ಟಮಿ ಉತ್ಸವಕ್ಕೆ ಗಣ್ಯರಿಂದ ಚಾಲನೆ ನಡೆಯಲಿದೆ. ಸ್ವಾತಂತ್ರ್ಯ ದಿನದ ಅಂಗವಾಗಿ ರಾಷ್ಟ್ರದ್ವಜಾರೋಹಣ, ವಿವಿದ ಭಜನಾ ಮಂಡಳಿಗಳಿಂದ ಭಜನೆ, ಬೆಳಗ್ಗೆ 10.30 ಕ್ಕೆ ಕೃಷ್ಣಾಂಗಣದಲ್ಲಿ ಪಿಲಿ ನಲಿಕೆ, ಮಧ್ಯಾಹ್ನ ಮಹಾಪೂಜೆ ಪ್ರಸಾದ ವಿತರಣೆ ನಡೆಯಲಿದೆ ಎಂದರು.

ಸುದ್ದಿಗೋಷ್ಠಿ ಯಲ್ಲಿ ಮಂದಿರದ ಪ್ರಧಾನ ಕಾರ್ಯದರ್ಶಿ ರವೀಂದ್ರ ಕುಂಪಲ, ಕಾರ್ಯದರ್ಶಿ ದೀಕ್ಚಿತ್ ನಿಸರ್ಗ, ಉತ್ಸವ ಸಮಿತಿ ಸಂಚಾಲಕ ಜಯ ಪೂಜಾರಿ ಲಕ್ಷ್ಮಿಗುಡ್ಡೆ, ಕಾರ್ಯದರ್ಶಿ ತಿಮ್ಮಯ್ಯ ಆಶ್ರಯಕಾಲನಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News