ಫೆ.18: ನೆಹರು ವಿಚಾರ ವೇದಿಕೆ ವತಿಯಿಂದ 'ಗಾಂಧಿ-ಅಂಬೇಡ್ಕರ್-ನೆಹರು' ವಿಚಾರಗೊಷ್ಠಿ
Update: 2025-02-14 20:46 IST
ಮಂಗಳೂರು, ಫೆ.14; ನೆಹರು ವಿಚಾರ ವೇದಿಕೆ ಮಂಗಳೂರು ಇದರ ವತಿಯಿಂದ 'ಗಾಂಧಿ-ಅಂಬೇಡ್ಕರ್-ನೆಹರು' ಸ್ವಾತಂತ್ರ್ಯ-ಸಂವಿಧಾನ-ದೂರದೃಷ್ಟಿ ಎಂಬ ವಿಷಯದಲ್ಲಿ ಫೆ.18ರಂದು ಬೆ.10ಗಂಟೆಗೆ ನಗರದ ಉರ್ವಸ್ಟೋರ್ ನ ಅಂಬೇಡ್ಕರ್ ಭವನದಲ್ಲಿ ವಿಚಾರಗೊಷ್ಠಿ ಹಮ್ಮಿಕೊಳ್ಳಲಾಗಿದೆ.
ಕರ್ನಾಟಕ ಸರಕಾರದ ಲೋಕೋಪಯೋಗಿ ಇಲಾಖೆಯ ಸಚಿವ ಸತೀಶ್ ಜಾರಕಿ ಹೋಳಿ ಉದ್ಘಾಟಕರಾಗಿ ಭಾಗವಹಿಸಲಿ ದ್ದಾರೆ. ಮಾಜಿ ಸಚಿವ ರಮಾನಾಥ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ಗಾಂಧಿ ಮತ್ತು ಸ್ವಾತಂತ್ರ್ಯ ಬಗ್ಗೆ ಮುನೀರ್ ಜನ್ಸಾಲೆ (ಬೆಂಗಳೂರು ಕೆಪಿಸಿಸಿ ವಕ್ತಾರ) ಅಂಬೇಡ್ಕರ್ ಮತ್ತು ಸಂವಿಧಾನದ ಕುರಿತು ಬ್ರಿಜೇಶ್ ಕಾಳಪ್ಪ(ಹಿರಿಯ ವಕೀಲರು, ಸುಪ್ರೀಂಕೋರ್ಟ್ ನವದೆಹಲಿ)ನೆಹರು ಮತ್ತು ದೂರದೃಷ್ಟಿ ಕುರಿತು ದಿನೇಶ್ ಅಮೀನ್ ಮಟ್ಟು(ಹಿರಿಯ ಪತ್ರಕರ್ತರು, ಬೆಂಗಳೂರು)ವಿಷಯ ಮಂಡನೆ ಮಾಡಲಿದ್ದಾರೆ ಮುಖ್ಯ ಅತಿಥಿಗಳಾಗಿ ಶಾಸಕರು ಇತರ ಪ್ರತಿನಿಧಿ ಗಳು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.