×
Ad

ಮಾ.22ರ ಬಂದ್‌ಗೆ ದ.ಕ.ಜಿಲ್ಲೆಯಲ್ಲಿ ಬೆಂಬಲವಿಲ್ಲ; ಬಸ್ ಸಂಚಾರ ಯಥಾಸ್ಥಿತಿ

Update: 2025-03-21 20:10 IST

ಫೈಲ್‌ ಫೋಟೊ 

ಮಂಗಳೂರು, ಮಾ.21: ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ಮರಾಠಿಗರರು ನಡೆಸುವ ದೌರ್ಜನ್ಯ, ದಬ್ಬಾಳಿಕೆ ಖಂಡಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆಲವು ಕನ್ನಡ ಪರ ಸಂಘಟನೆಗಳು ಮಾ.22ರಂದು ಕರೆ ನೀಡಿರುವ ರಾಜ್ಯ ಬಂದ್‌ಗೆ ದ.ಕ.ಜಿಲ್ಲೆಯಲ್ಲಿ ಯಾವುದೇ ಸ್ಪಂದನೆ ವ್ಯಕ್ತವಾಗಿಲ್ಲ.

ಜಿಲ್ಲೆಯ ಜೀವನಾಡಿಯಂತಿರುವ ಖಾಸಗಿ ಸಿಟಿ, ಸರ್ವಿಸ್, ಎಕ್ಸ್‌ಪ್ರೆಸ್ ಬಸ್‌ಗಳು ಎಂದಿನಂತೆ ಮಾ.22ರಂದು ಸಂಚರಿಸಲಿದೆ. ಉಳಿದಂತೆ ರಿಕ್ಷಾ ಕೂಡ ಚಲಿಸಲಿವೆ. ಹೊಟೇಲ್, ಅಂಗಡಿ ಮುಂಗಟ್ಟುಗಳು ತೆರೆಯಲಿದೆ.

ದ.ಕ. ಬಸ್ ಮಾಲಕರ ಸಂಘ ಹಾಗೂ ಕೆನರಾ ಬಸ್ ಮಾಲಕರ ಸಂಘವು ಬೆಳಗಾವಿ ಕನ್ನಡಿಗರ ಮೇಲೆ ನಡೆಸುವ ದೌರ್ಜನ್ಯಕ್ಕೆ ಖಂಡನೆ ವ್ಯಕ್ತಪಡಿಸಿದೆ. ಸಂಘಟನೆಗಳ ವಿವಿಧ ಬೇಡಿಕೆಗೆ ಸಹಮತ, ಸಹಾನುಭೂತಿ ವ್ಯಕ್ತಪಡಿಸಿದೆ.

ಬಸ್ ಮಾಲಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಆದರೆ ಶನಿವಾರ ಬಸ್ ಬಂದ್ ಮಾಡುವುದಿಲ್ಲ. ಇತರ ಸಾಮಾನ್ಯ ದಿನಗಳಂತೆ ಬಸ್‌ಗಳು ಸಂಚರಿಸಲಿದೆ. ಸಾವರ್ಜನಿಕರ ಹಿತದೃಷ್ಟಿ, ಮುಖ್ಯವಾಗಿ ಪರೀಕ್ಷೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಸ್ ಬಂದ್ ಮಾಡುವುದಿಲ್ಲ ಎಂದು ದ.ಕ ಬಸ್ ಮಾಲಕರ ಸಂಘದ ಅಧ್ಯಕ್ಣ ಅಝೀಝ್ ಪರ್ತಿಪಾಡಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬಸ್ ಬಂದ್‌ಗೆ ಯಾವುದೇ ಸಂಘಟನೆಗಳು ನಮ್ಮನ್ನು ಕೋರಿಕೊಂಡಿಲ್ಲ. ಸಾರ್ವಜನಿಕರಿಗೆ ಸಮಸ್ಯೆ ಯಾಗುವುದರಿಂದ ಬಂದ್ ಮಾಡುವುದಿಲ್ಲ ಎಂದು ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಳ್ಳಾಲ್ ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News