ಫೆ.23: ಪಿ.ಎ. ಕಾಲೇಜಿನಲ್ಲಿ ಬ್ಯಾರಿ ಕವಿಗೋಷ್ಠಿ
Update: 2024-02-21 19:39 IST
ಮಂಗಳೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ವತಿಯಿಂದ ದೇರಳಕಟ್ಟೆಯ ‘ಮೇಲ್ತೆನೆ’ ಮತ್ತು ಕೊಣಾಜೆ ನಡುಪದವಿನ ಪಿ.ಎ. ಪ್ರಥಮ ದರ್ಜೆ ಕಾಲೇಜಿನ ಸಹಕಾರದಲ್ಲಿ ಫೆ.23ರಂದು ಬೆಳಗ್ಗೆ 10ಕ್ಕೆ ಕಾಲೇಜಿನ ಸಭಾಂಗಣದಲ್ಲಿ ಬ್ಯಾರಿ ಕವಿಗೋಷ್ಠಿ ನಡೆಯಲಿದೆ.
ಕಾಲೇಜಿನ ಪ್ರಾಂಶುಪಾಲ ಡಾ. ಸರ್ಫ್ರಾಝ್ ಹಾಸಿಂ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕಾಲೇಜಿನ ಎಜಿಎಂ ಶರ್ಫುದ್ದೀನ್ ಪಿ.ಕೆ. ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮೇಲ್ತೆನೆಯ ಗೌರವಾಧ್ಯಕ್ಷ ಆಲಿಕುಂಞಿ ಪಾರೆ ಅಧ್ಯಕ್ಷತೆ ವಹಿಸಲಿದ್ದಾರೆ. ಅಕಾಡಮಿಯ ರಿಜಿಸ್ಟ್ರಾರ್ ಆರ್.ಮನೋಹರ ಕಾಮತ್ ಮತ್ತು ಮೇಲ್ತೆನೆಯ ಅಧ್ಯಕ್ಷ ಅಶೀರುದ್ದೀನ್ ಸಾರ್ಥಬೈಲ್ ಉಪಸ್ಥಿತರಿರುವರು.
ಕವಿಗಳಾದ ಬಶೀರ್ ಅಹ್ಮದ್ ಕಿನ್ಯ, ಶಮೀಮಾ ಕುತ್ತಾರ್, ಹಾಜಿ ಇಬ್ರಾಹೀಂ ನಡುಪದವು, ರಮೀಝಾ ಎಂ.ಬಿ., ಫಯಾಝ್ ದೊಡ್ಡಮನೆ, ಸಿಹಾನಾ ಬಿ.ಎಂ., ನಿಝಾಮ್ ಗೋಳಿಪಡ್ಪು, ಸಾರಾ ಮಸ್ಕುರುನ್ನಿಸಾ ಕವನ ವಾಚಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.