ಜ.24ರಂದು ಎಸ್‌ವೈಎಸ್ ಮಹಾ ಸಮ್ಮೇಳನ
ಮಂಗಳೂರು: ಕರ್ನಾಟಕ ಸ್ಟೇಟ್ ಸುನ್ನಿ ಯುವಜನ ಸಂಘ (ಎಸ್‌ವೈಎಸ್) ಇದರ 30ನೇ ವಾರ್ಷಿಕ ಮಹಾ ಸಮ್ಮೇಳನವು ಜ.24ರಂದು ನಡೆಯಲಿದ್ದು ಇದರ ಪ್ರಚಾರಾರ್ಥ ಜ.14ರಿಂದ ಜ.17ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 70 ಕೇಂದ್ರಗಳ ಸರ್ಕಲ್ ಪ್ರಯಾಣವು ನಡೆಯಲಿದೆ ಎಂದು ಪ್ರಚಾರ ಸಮಿತಿಯ ಚೀಫ್ ಕೋಆರ್ಡಿನೇಟರ್ ಹಾಫಿಳ್ ಯಾಕೂಬ್ ಸಅದಿ ನಾವೂರು ತಿಳಿಸಿದರು.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.14ರಂದು ಬೆಳಗ್ಗೆ 9 ಗಂಟೆಗೆ ಸಯ್ಯದ್ ಮದನಿ ದರ್ಗಾ ಉಳ್ಳಾಲ ಝೀಯಾರತ್‌ನೊಂದಿಗೆ ಪ್ರಾರಂಭಗೊಳ್ಳಲಿದ್ದು ಅಂದು ಸಂಜೆ ಬಂಟ್ವಾಳ ಸರ್ಕಲ್‌ನ ಮಾವಿನಕಟ್ಟೆಯಲ್ಲಿ ಸಮಾರೋಪಗೊಳ್ಳಲಿದೆ. ದ.ಕ ಜಿಲ್ಲೆಯ 13 ಸರ್ಕಲ್‌ಗಳಾದ ಮಂಗಳೂರು, ಉಳ್ಳಾಲ, ಮುಡಿಪು, ಬಂಟ್ವಾಳ, ಸುರತ್ಕಲ್, ಮೂಡುಬಿದಿರೆ, ದೇರಳಕಟ್ಟೆ, ವಿಟ್ಲ, ಪುತ್ತೂರು, ಬೆಳ್ತಂಗಡಿ, ಉಪ್ಪಿನಂಗಡಿ, ಸುಳ್ಯ, ಕಡಬಗಳ ಅಧೀನದ 70 ಕೇಂದ್ರಗಳಲ್ಲಿ ಸರ್ಕಲ್ ಪ್ರಯಾಣ ಸಂದೇಶಯಾತ್ರೆ ನಡೆಯಲಿದೆ ಎಂದರು.
ಪರಂಪರೆಯ ಪ್ರತಿನಿಧಿಗಳಾಗೋಣ ಎಂಬ ಘೋಷವಾಕ್ಯದಲ್ಲಿ ಪ್ರಚಾರ ಕಾರ್ಯ ನಡೆಯಲಿದೆ. ಎಸ್‌ವೈಎಸ್, ಎಸ್‌ಎಸ್‌ಎಫ್, ಮುಸ್ಲಿಂ ಜಮಾಅತ್ ಸಂಘಟನೆಗಳ ನಾಯಕರು ವಿವಿಧ ಕೇಂದ್ರಗಳಲ್ಲಿ ಮಾತನಾಡಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎಂ ಪಿಎಂ ಅಶ್ರಫ್ ಸಅದಿ ಮಲ್ಲೂರು, ಮುಹಮ್ಮದ್ ಆಲಿ ಸಖಾಫಿ ಅಶ್‌ಅರಿಯ್ಯ, ಅಶ್ರಫ್ ಕಿನಾರ ಮಂಗಳೂರು, ಅಬ್ದುಲ್ ರಹಿಮಾನ್ ಪ್ರಿಂಟೆಕ್, ಇರ್ಷಾದ್ ಗೂಡಿನಬಳಿ, ನವಾಝ್ ಸಖಾಫಿ ಅಡ್ಯಾರ್ ಪದವು ಉಪಸ್ಥಿತರಿದ್ದರು.