ನ.25 ರಂದು ಬೋಳಾರದ ಶಾದಿಮಹಲ್ ನಲ್ಲಿ ಸೀರತ್ ಕಾರ್ಯಕ್ರಮ
Update: 2023-11-24 14:49 IST
ಮಂಗಳೂರು: ಯುನಿವೆಫ್ ಕರ್ನಾಟಕದ ವತಿಯಿಂದ 2023 ರ ಅಕ್ಟೋಬರ್ 6 ರಿಂದ ಡಿಸೆಂಬರ್ 22 ವರೆಗೆ ಹಮ್ಮಿಕೊಳ್ಳಲಾದ "ಮಾನವ ಧರ್ಮ, ದೈವಿಕ ಕಾನೂನು ಮತ್ತು ಪ್ರವಾದಿ ಮುಹಮ್ಮದ್ (ಸ)" ಎಂಬ ಕೇಂದ್ರೀಯ ವಿಷಯದಲ್ಲಿ "ಅರಿಯಿರಿ ಮನುಕುಲದ ಪ್ರವಾದಿಯನ್ನು" ಅಭಿಯಾನದ ಪ್ರಯುಕ್ತ ನವೆಂಬರ್ 25 ರ ಶನಿವಾರ ರಾತ್ರಿ 7.45 ಕ್ಕೆ ಬೋಳಾರದ ಶಾದಿಮಹಲ್ ನಲ್ಲಿ ಸೀರತ್ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ನಿಮ್ರಾ ಮಸೀದಿಯ ಖತೀಬ್ ಹಾಗೂ ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿಯವರು "ಪ್ರವಾದಿ ಹಃ ಮುಹಮ್ಮದ್ (ಸ) ರ ಮಾದರಿ ಜೀವನ" ಎಂಬ ವಿಷಯದಲ್ಲಿ ಪ್ರಮುಖ ಭಾಷಣ ಮಾಡಲಿದ್ದಾರೆ.
ಜಿಲ್ಲಾ ವಕ್ಫ್ ಬೋರ್ಡ್ ಉಪಾಧ್ಯಕ್ಷ ಜನಾಬ್ ಪಕೀರಬ್ಬ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮಂಗಳೂರು ಶಾಖಾಧ್ಯಕ್ಷ ಉಬೈದುಲ್ಲಾ ಬಂಟ್ವಾಳ ವಿನಂತಿಸಿದ್ದಾರೆ.
ಸ್ತ್ರೀಯರಿಗೆ ಪ್ರತ್ಯೇಕ ಸ್ಥಳಾವಕಾಶ ಮಾಡಲಾಗಿದೆ.