×
Ad

ರಾಜ್ಯ ಅಥ್ಲೆಟಿಕ್ಸ್ ಮೀಟ್‌ನಲ್ಲಿ 3 ನೂತನ ಕೂಟ ದಾಖಲೆ

Update: 2023-09-28 23:23 IST

ಮಂಗಳೂರು, ಸೆ.28: ನಗರದ ಮಂಗಳಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕರ್ನಾಟಕ ರಾಜ್ಯ ಜೂನಿಯರ್ ಮತ್ತು 23 ವರ್ಷ ಪ್ರಾಯದೊಳಗಿನವರ ಅಥ್ಲೆಟಿಕ್ಸ್ ಮೀಟ್-2023ರಲ್ಲಿ 2ನೇ ದಿನವಾದ ಗುರುವಾರ 3 ಹೊಸ ರಾಜ್ಯ ಕೂಟ ದಾಖಲಾಗಿದೆ.

ಅಂಡರ್-20 ಬಾಲಕರ ವಿಭಾಗದ 10000 ಮಿ ಓಟದಲ್ಲಿ 30:34.90 ಸಮಯದಲ್ಲಿ ಗುರಿ ತಲುಪಿದ ಹಾವೇರಿಯ ಶಿವಾಜಿ ನೂತನ ಕೂಟ ದಾಖಲೆ ನಿರ್ಮಿಸಿದ್ದಾರೆ. ಹಿಂದಿನ ದಾಖಲೆಯು 31:34.3 ಆಗಿತ್ತು.

ಅಂಡರ್-23 ಬಾಲಕರ ವಿಭಾಗದ 10000 ಮಿ. ಓಟದಲ್ಲಿ ಯಾದಗಿರಿಯ ವೈಭವಿ ಹಿಂದಿನ ದಾಖಲೆಯು 32:39.00 ಸೆಕೆಂಡುಗಳ ದಾಖಲೆ ಮುರಿದು 32:17.00ಗೆ ಗುರಿ ತಲುಪಿ ಹೊಸ ರಾಜ್ಯ ಮೀಟ್ ದಾಖಲಿಸಿದ್ದಾರೆ.

ಅಂಡರ್-16 ವರ್ಷ ಪ್ರಾಯದೊಳಗಿನ ಬಾಲಕರ ವಿಭಾಗದ ಶಾಟ್‌ಪುಟ್‌ನಲ್ಲಿ ಉಡುಪಿಯ ಅನುರಾಗ್ ಜಿ. 16.86 ಮೀ ದೂರದೊಂದಿಗೆ ಹೊಸ ರಾಜ್ಯ ಕೂಟ ದಾಖಲೆಯನ್ನು ನಿರ್ಮಿಸಿದ್ದಾರೆ. ಗಣೇಶ್ ಎಚ್.ನಾಯ್ಕ ಅವರು ಈ ಹಿಂದೆ 15.68 ಮೀ ದಾಖಲಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News