×
Ad

77ನೇ ಸ್ವಾತಂತ್ರೋತ್ಸ: 77 ಮಂದಿಯಿಂದ 77 ಕಿಮೀ. ಸೈಕಲ್ ರ‍್ಯಾಲಿ

Update: 2023-08-15 17:43 IST

ಪಡುಬಿದ್ರಿ: 77ನೇ ಸ್ವಾತಂತ್ರೋತ್ಸವ ಪ್ರಯುಕ್ತ 77 ಮಂದಿ ಸೈಕಲ್ ಸವಾರರು 77 ಕಿಮೀ ದೂರ ಸೈಕಲ್ ರ‍್ಯಾಲಿ ನಡೆಸಿ ವಿಶಿಷ್ಠವಾಗಿ ಸ್ವಾತಂತ್ರೋತ್ಸವವನ್ನು ಆಚರಿಸಿದರು.

ಉಡುಪಿ ಕಡೆಯಿಂದ ಹೊರಟ ಸೈಕಲ್ ರ‍್ಯಾಲಿಯ ನೇತೃತ್ವವನ್ನು ಡಾ. ಗುರುರಾಜ್ ಭಟ್ ಹಾಗೂ ಮಂಗಳೂರು ಕಡೆಯಿಂದ ಮಹೇಶ್ ಕುಮಾರ್ ನೇತೃತ್ವ ವಹಿಸಿದ್ದರು. ಎರಡೂ ಕಡೆಯ ಸೈಕಲ್ ರ್ಯಾಲಿಯು ಹೆಜಮಾಡಿ ಟೋಲ್ ಬಳಿ ಜಮಾಯಿಸಿ ದರು. ಬಳಿಕ ಅಲ್ಲಿಂದ ಪಡುಬಿದ್ರಿ ಬ್ಲೂಫ್ಲ್ಯಾಗ್ ಬೀಚ್‍ನಲ್ಲಿ ನಡೆದ 77ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಿದ್ದರು. ಅಲ್ಲಿಂದ ಮತ್ತೆ ಕಾರ್ಕಳ ರಾಜ್ಯ ಹೆದ್ದಾರಿ ಮೂಲಕ ಅಡ್ವೆ ರಸ್ತೆಯಲ್ಲಿ ಫಲಿಮಾರು ಅಣೆಕಟ್ಟುವಿನ ವರೆಗೆ ತಲುಪಿ ಅಲ್ಲಿ ಸಮಾಪ್ತಿ ಮಾಡಲಾಯಿತು.

ಬ್ಲೂಫ್ಲ್ಯಾಗ್ ಬೀಚ್‍ನಲ್ಲಿ ನಡೆದ ಧ್ವಜಾರೋಹಣವಮ್ಮಿ ಪ್ರವಾಸೋದ್ಯಮ ಇಲಾಖೆ ಉಡುಪಿ ಜಿಲ್ಲೆಯ ಸಹಾಯಕ ನಿರ್ದೇಶಕ ಕುಮಾರ್ ನೆರವೇರಿಸಿದರು. ಸ್ಥಳೀಯ ಮುಖಂಡರಾದಂತ ಸುಕುಮಾರ್ ಶ್ರೀಯಾನ್, ಯತೀನ್ ಬಂಗೇರ, ಪ್ರವಾಸೋ ದ್ಯಮ ಇಲಾಖೆಯ ಸಿಬ್ಬಂದಿಗಳು ಮತ್ತು ಬ್ಲೂ ಫ್ಲಾಗ್ ಬೀಚಿನ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಬೀಚ್ ಪ್ರಬಂಧಕ ವಿಜಯ ಶೆಟ್ಟಿ ಅವರು ನಿರೂಪಿಸಿ, ಸ್ವಾಗತಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News