ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ಪ್ರೊ. ಬಿ. ಕೃಷ್ಣಪ್ಪ ಅವರ 87ನೇ ಜನ್ಮದಿನಾಚರಣೆ
ಮಂಗಳೂರು: ಕನಾ೯ಟಕ ದಲಿತ ಸಂಘರ್ಷ ಸಮಿತಿ (ರಿ)ಸ್ವಾಭಿಮಾನಿ ಪ್ರೋ. ಕೃಷ್ಣಪ್ಪ ಬಣ ಇದರ ವತಿಯಿಂದ ಜೂ.22 ಅದಿತ್ಯವಾರ ಕನಾ೯ಟಕ ದಲಿತ ಸಂಘಷ೯ ಸಮಿತಿಯ ಸಂಸ್ಥಾಪಕ ಪ್ರೋ ಬಿ. ಕೃಷ್ಣಪ್ಪ ರವರ 87ನೇ ಜನ್ಮದಿನಾಚರಣೆ ಬಿಲ್ಲವ ಸಮಾಜ ಸೇವಾ ಸಂಘ ಕೆಂಜಾರು- ಪೇಜಾವರ-ತೋಕೂರು ಇದರ ಸಭಾಂಗಣದಲ್ಲಿ ಆಚರಿಸಲಾಯಿತು.
ಕಾಯ೯ಕ್ರಮವನ್ನು ಮಂಗಳೂರು ತಾಲೂಕು ಸಮಿತಿಯ ಸಂಚಾಲಕರಾದ ರಾಘವೇಂದ್ರ ಅವರು ಉದ್ಘಾಟಿಸಿದರು. ದ.ಕ ಜಿಲ್ಲಾ ಸಂಚಾಲಕ ಸದಾಶಿವ ಪಡುಬಿದ್ರಿ, ಜಿಲ್ಲಾ ಸಂಘಟನಾ ಸಂಚಾಲಕ ರಘು.ಕೆ. ಎಕ್ಕಾರು, ಲಿಂಗಪ್ಪ ಕುಂದರ್ ಸಂದರ್ಭೋಚಿತವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಅಪೂರ್ವ ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ವೇದಿಕೆಯಲ್ಲಿ ಜಿಲ್ಲಾ ಮಹಿಳಾ ಸಂಚಾಲಕಿ ಸರೋಜಿನಿ ಬಂಟ್ವಾಳ, ಜಿಲ್ಲಾ ದಲಿತ ನೌಕರರ ಒಕ್ಕೂಟದ ಉಸ್ತುವಾರಿ ಹೆಚ್. ಡಿ. ಲೋಹಿತ್, ದಲಿತ ಕಲಾ ಮಂಡಳಿ ತಾಲೂಕು ಸಂಚಾಲಕರಾದ ಗಂಗಾಧರ್ ಜೋಕಟ್ಟೆ, ತಾಲೂಕು ಸಂಘಟನಾ ಸಂಚಾಲಕರಾದ ರುಕ್ಕಯ್ಯ ಅಮೀನ್ ಕರಂಬಾರು, ಎಕ್ಕಾರು ಗ್ರಾಮ ಸಂಚಾಲಕರಾದ ಗಣೇಶ್ ಕೆಂಚಗುಡ್ಡೆ,ಗ್ರಾಮ ಪಂಚಾಯತ್ ಸದಸ್ಯರಾದ ಚೆನ್ನಪ್ಪ ಸಾಲ್ಯಾನ್ ಮುಂತಾದವರು ಉಪಸ್ಥಿತರಿದ್ದರು.
ಕೃಷ್ಣ ಕೆ ಎಕ್ಕಾರು ಕಾಯ೯ಕ್ರಮ ನಿರ್ವಹಿಸಿ ಜಾಗೃತಿಯವರು ಧನ್ಯವಾದ ಅರ್ಪಿಸಿದರು.