×
Ad

ಬಹರೈನ್ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಅಬ್ದುಲ್ ಶಕೀಲ್ ಆಯ್ಕೆ

Update: 2025-11-26 22:02 IST

ಅಬ್ದುಲ್ ಶಕೀಲ್

ಮಂಗಳೂರು,ನ.26: ಎನ್‌ಆರ್‌ಐ ಫೋರಂ ಕರ್ನಾಟಕ ಬಹರೈನ್ 2025ನೇ ಸಾಲಿನ ಬಹರೈನ್ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಸಮಾಜ ಸೇವಕ, ಅಬ್ದುಲ್ ಶಕೀಲ್ ಚಾರಿಟೇಬಲ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಅಬ್ದುಲ್ ಶಕೀಲ್ ಆಯ್ಕೆಯಾಗಿದ್ದಾರೆ.

ಬಹರೈನ್‌ನ ಇಂಡಿಯನ್ ಕ್ಲಬ್ ಓಪನ್ ಗ್ರೌಂಡ್‌ನಲ್ಲಿ ನ.28ರಂದು ನಡೆಯುವ ಕರ್ನಾಟಕ ರಾಜ್ಯೋತ್ಸವ ಸಂಭ್ರಮ 2025 ಕಾರ್ಯಕ್ರಮದಲ್ಲಿ ಭಾರತೀಯ ರಾಯಭಾರಿ ಎಚ್.ಇ. ವಿನೋದ್ ಕೆ. ಜೇಕಬ್, ಸ್ಪೀಕರ್ ಡಾ.ಯು.ಟಿ.ಖಾದರ್ ಫರೀದ್, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತ ಇದರ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News