×
Ad

ಬಂಟ್ವಾಳ | ಮಡಂತ್ಯಾರಿನಲ್ಲಿ ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ: 23 ಮಂದಿಯ ಬಂಧನ

Update: 2024-09-21 13:16 IST

ಬಂಟ್ವಾಳ: ಪೂಂಜಾಲಕಟ್ಟೆ ಠಾಣಾ ವ್ಯಾಪ್ತಿಯ ಮಡಂತ್ಯಾರಿನಲ್ಲಿ ನಡೆಯುತ್ತಿದ್ದ ಜುಗಾರಿ ಅಡ್ಡೆಗೆ ದಾಳಿ ನಡೆಸಿದ ಪೊಲೀಸರು 23 ಮಂದಿಯನ್ನು ಬಂಧಿಸಿದ್ದಾರೆ.

ಬೆಳ್ತಂಗಡಿ ತಾಲೂಕು ಮಾಲಾಡಿ ಗ್ರಾಮದ ಮಡಂತ್ಯಾರು ಪೇಟೆಯ ಬಳಿಯಿರುವ ಅಲ್ಬರ್ಟ್ ಡಿಸೋಜ ಎಂಬವರಿಗೆ ಸೇರಿದ ಕಟ್ಟಡದ ಹಿಂಭಾಗದ ಶೆಡ್ ನಲ್ಲಿ ಜುಗಾರಿ ಆಟ ನಡೆಯುತ್ತಿತ್ತು ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ 23 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಅವರಿಂದ ನಗದು ಹಾಗೂ ಸೊತ್ತುಗಳನ್ನು ವಶಪಡಿಸಿಕೊಂಡಿದ್ದ, ಅವುಗಳ ಮೌಲ್ಯ 36,729 ರೂ. ಎಂದು ಪೊಲೀಸರು ತಿಳಿಸಿದ್ದಾರೆ.

Full View

ಅಬ್ದುಲ್ ಖಾದರ್, ಮುಹಮ್ಮದ್ ಹೈದರ್, ಜೋಸ್ ಥೋಮಸ್, ಅಬೂಬಕರ್, ಲೋಕನಾಥ ತುಕರಾಮ್, ಅಬ್ದುಲ್ ರಹ್ಮಾನ್, ಯಶೋಧರ, ರಮೇಶ್ ಆಚಾರ್ಯ, ಜಿ.ಎ.ದಾವೂದ್, ರಿಯಾಝ್, ಹಮ್ಮದ್, ಅಬೂಬಕರ್, ಅಬ್ದುಲ್ ರವೂಫ್, ಮುಸ್ತಫ, ಎಂ.ಅಶ್ರಫ್, ರಮೇಶ್ ಕೆ., ಅಬ್ದುಲ್ ರಝಾಕ್, ಕಮಲಾಕ್ಷ ದಾಸ್, ವಿಜಯ ಕುಮಾರ್, ಮಜೀದ್, ಶ್ರೀಧರ ಪೂಜಾರಿ, ಮುನ್ನ ಎಂಬವರನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿ ಮೊನಪ್ಪ ಪೂಜಾರಿ ಎಂಬಾತ ಪರಾರಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News