×
Ad

ಬಂಟ್ವಾಳ: ವಕೀಲರ ಸಂಘದ ವತಿಯಿಂದ ಕಾನೂನು ಕಾರ್ಯಾಗಾರ

Update: 2024-07-28 12:54 IST

ಬಂಟ್ವಾಳ : ವಕೀಲರ ಸಂಘ ಬಂಟ್ವಾಳ, ಅಧಿವಕ್ತ ಪರಿಷತ್ ಕರ್ನಾಟಕ, ದಕ್ಷಿಣ ಪ್ರಾoತ, ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ಘಟಕ ಇದರ ಸಹಯೋಗದಲ್ಲಿ ಹೊಸದಾಗಿ ಜಾರಿಗೆ ತಂದ ಮೂರು ಕಾನೂನುಗಳ ಬಗ್ಗೆ ಕಾರ್ಯಗಾರವು ಬಂಟ್ವಾಳ ಜೆ.ಎಂ.ಎಫ್.ಸಿ. ನ್ಯಾಯಾಲಯದ ಆವರಣದಲ್ಲಿ ಶನಿವಾರ ನಡೆಯಿತು.

ಕಾರ್ಯಕ್ರಮವನ್ನು ಬಂಟ್ವಾಳದ ಹಿರಿಯ ಸಿವಿಲ್ ನ್ಯಾಯಾಧೀಶೆ ಭಾಗ್ಯಮ್ಮ ಉದ್ಘಾಟಿಸಿದರು. ಬಂಟ್ವಾಳ ವಕೀಲರ ಸಂಘದ ಅಧ್ಯಕ್ಷ ರಿಚರ್ಡ್ ಕೊಸ್ತಾ ಎಂ ಅಧ್ಯಕ್ಷತೆ ವಹಿಸಿದ್ದರು.

ಮಂಗಳೂರಿನ ಹಿರಿಯ ವಕೀಲ ಪರಮೇಶ್ವರ ಜೋಯಿಷ ಅವರು ಹೊಸ ಮೂರು ಕಾನೂನುಗಳ ಬಗ್ಗೆ ಸಂವಾದ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಬಂಟ್ವಾಳದ ಪ್ರದಾನ ಸಿವಿಲ್ ನ್ಯಾಯಾಧೀಶ ಚಂದ್ರಶೇಖರ. ವೈ ತಳವಾರ, ಹೆಚ್ಚುವರಿ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶ ಕೃಷ್ಣ ಮೂರ್ತಿ. ಎನ್ ಅತಿಥಿಗಳಾಗಿ ಭಾಗವಹಿಸಿದ್ದರು. ಅಧಿವಕ್ತ ಪರಿಷತ್ ಬಂಟ್ವಾಳ ಘಟಕದ ಅಧ್ಯಕ್ಷೆ ಉಮಾ ಎನ್. ಸೋಮಯಾಜಿ ಉಪಸ್ಥಿತರಿದ್ದರು.

ವೀರೇಂದ್ರ. ಎಂ ಸಿದ್ದಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News