×
Ad

ಬಂಟ್ವಾಳ: ಮೀನು ವ್ಯಾಪಾರಿ ಆತ್ಮಹತ್ಯೆ

Update: 2023-10-23 20:35 IST

ಸನತ್ ಕುಮಾರ್

ಬಂಟ್ವಾಳ : ಸಾಲದ ಬಾಧೆಯಿಂದ ಮಾನಸಿಕವಾಗಿ ನೊಂದಿದ್ದ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿ ದ್ದಾರೆ ಎನ್ನಲಾದ ಘಟನೆ ಸಜೀಪದಲ್ಲಿ ಸೋಮವಾರ ನಡೆದಿದೆ.

ಸಜೀಪ ಪಡು ಗ್ರಾಮದ ತಲೆಮೊಗರು ನಿವಾಸಿ ಸನತ್ ಕುಮಾರ್ ಆತ್ಮಹತ್ಯೆ ‌ಮಾಡಿಕೊಂಡ ಯುವಕ ಎಂದು ಗುರುತಿಸಲಾಗಿದೆ.

ಹಸಿ ಮೀನು ವ್ಯಾಪಾರ ಮಾಡುತ್ತಿದ್ದ ಸನತ್ ಇತ್ತೀಚಿಗೆ ಸಾಲ ಮಾಡಿ ಟೆಂಪೋ ರಿಕ್ಷಾವನ್ನು ಖರೀದಿ ಮಾಡಿದ್ದು, ಇತ್ತೀಚಿನ ದಿನಗಳಲ್ಲಿ ಮೀನು ವ್ಯಾಪಾರದಲ್ಲಿ ಹಣ ಕಳೆದುಕೊಂಡು ವಾಹನ ಖರೀದಿಗಾಗಿ ಮಾಡಿದ್ದ ಬ್ಯಾಂಕ್ ಸಾಲದ ಕಂತನ್ನು ಕಟ್ಟಲು ಸಾಧ್ಯವಾಗಿರಿಲ್ಲ ಎಂದು ಹೇಳಲಾಗಿದೆ.

ಟೆಂಪೋವನ್ನು ಕೂಡ ಮಾರಾಟ ಮಾಡಿದ್ದ ಈತ ಕೋಳಿ ಅಂಕ (ಜೂಜಾಟ) ದಲ್ಲಿಯೂ ಹಣ ಕಳೆದುಕೊಂಡು ಮಾನಸಿಕವಾಗಿ ‌ನೊಂದುಕೊಂಡಿದ್ದ ಎಂದು ತಿಳಿದುಬಂದಿದೆ.

ಮನೆ ಮಂದಿ ಹತ್ತಿರದ ಭಜನಾ ಮಂದಿರದಲ್ಲಿ ನಡೆಯುವ ‌ನವರಾತ್ರಿ‌ ಪೂಜೆಗೆ ತೆರಳಿದ್ದ ವೇಳೆ ಮನೆಯ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ‌ಮಾಡಿಕೊಂಡಿದ್ದು, ಮನೆಯವರು ಪೂಜೆ ಮುಗಿಸಿಕೊಂಡು ಮನೆಗೆ ಬಂದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಗಮನಕ್ಕೆ ಬಂದಿದೆ ಎಂದು ತಿಳಿಸಿದ್ದಾರೆ.

ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಠಾಣಾಧಿಕಾರಿ ಹರೀಶ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News