×
Ad

ಬಂಟ್ವಾಳ: ಅಕ್ಕಿ ಸಾಗಾಟದ ಲಾರಿ ಪಲ್ಟಿ; ಅಪಾಯದಿಂದ ಚಾಲಕ ಪಾರು

Update: 2023-10-07 16:04 IST

ಬಂಟ್ವಾಳ: ಅಕ್ಕಿ ಸಾಗಾಟದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ  ಬಂಟ್ವಾಳ ಸಮೀಪದ ಅಂಚಿಕಟ್ಟೆ ಎಂಬಲ್ಲಿ ಶನಿವಾರ ಮಧ್ಯಾಹ್ನದ ವೇಳೆ ನಡೆದಿದೆ.

ಮಂಗಳೂರಿನಿಂದ ಬೆಳ್ತಂಗಡಿಗೆ ಅಕ್ಕಿ ಸಾಗಾಟ ಮಾಡಿತ್ತಿದ್ದ ಈ ಲಾರಿ ಬಡಗುಂಡಿ ಅಂಚಿಕಟ್ಟೆ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಚಾಲಕನನ್ನು ಲಾರಿಯ ಗಾಜು ಪುಡಿ ಮಾಡಿ ಹೊರಕ್ಕೆ ತೆಗೆಯಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಲಾರಿ ಪಲ್ಟಿಯಾಗುವ ವೇಳೆ ರಸ್ತೆ ಬದಿಯ ವಿದ್ಯುತ್ ‌ಕಂಬಕ್ಕೆ ಡಿಕ್ಕಿಯಾಗಿ, ವಿದ್ಯುತ್ ಕಂಬ ತುಂಡಾಗಿ ಬಿದ್ದಿದೆ. ಅಲ್ಲೇ ಸಮೀಪದಲ್ಲಿ ಹೈ ಟೆನ್ಸನ್ ವಿದ್ಯುತ್ ವಯರ್ ಗಳಿದ್ದು ಸ್ವಲ್ಪದರಲ್ಲೇ ದೊಡ್ಡ ಅನಾಹುತ ತಪ್ಪಿದೆ. ಘಟನೆಯ ವೇಳೆ ವಿದ್ಯುತ್ ತಂತಿಗೆ ತಾಗುತ್ತಿದ್ದರೆ, ಅನೇಕ ಜೀವಹಾನಿಯಾಗುವ ಬೀಕರ ದುರಂತಕ್ಕೆ ಕಾರಣವಾಗುತ್ತಿತ್ತು ಎಂದು ಸಾರ್ವಜನಿಕರು ತಿಳಿಸಿದ್ದಾರೆ.

ಸ್ಥಳಕ್ಕೆ ಬಂಟ್ವಾಳ ಸಂಚಾರಿ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News