×
Ad

ಕಂದಕ್‌ನಲ್ಲಿ ರಕ್ತದಾನ ಶಿಬಿರ

Update: 2023-08-06 18:08 IST

ಮಂಗಳೂರು: ಕಂದಕ್ ಮುಸ್ಲಿಂ ಜಮಾತ್ (ರಿ) ಹಾಗೂ ಯುವಶಕ್ತಿ ಫ್ರೆಂಡ್ಸ್ ಇದರ ಜಂಟಿ ಆಶ್ರಯದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು (ರಿ) ಸಹಭಾಗಿತ್ವದಲ್ಲಿ ಯೆನೆಪೋಯ ಮೆಡಿಕಲ್ ಕಾಲೇಜು ಇವುಗಳ ಸಹಕಾರದೊಂದಿಗೆ ರಕ್ತದಾನ ಶಿಬಿರವು ನೀರೇಶ್ವಾಲ್ಯದ ಸರಕಾರಿ ಹಿ.ಪ್ರಾ. ಶಾಲೆಯಲ್ಲಿ ರವಿವಾರ ನಡೆಯಿತು.

ಅತಿಥಿಗಳಾಗಿ ಯೆನೆಪೋಯ ಮೆಡಿಕಲ್ ಕಾಲೇಜಿನ ಡಾ.ಗ್ಲೋರಿಯಾ, ಕಾರ್ಪೊರೇಟರ್ ಅಬ್ದುಲ್ ಲತೀಫ್, ಸರಕಾರಿ ಶಾಲೆಯ ಮುಖ್ಯ ಶಿಕ್ಷಕಿ ದಿಲ್‌ಶಾದ್, ಕಂದಕ್ ಮುಸ್ಲಿಮ್ ಜಮಾತ್‌ನ ಶರೀಫ್ ಕಂದಕ್, ಯುವ ಶಕ್ತಿ ಸ್ಥಾಪಕಾಧ್ಯಕ್ಷ ದೀಪಕ್ ಶೆಟ್ಟಿ, ಪ್ರಮೋದ್, ಬ್ಲಡ್ ಡೋನರ್ಸ್‌ನ ಸಂಚಾಲಕ ಫರ್ಹಾನ್ ಸಿದ್ದಕಟ್ಟೆ ಭಾಗವಹಿಸಿದ್ದರು.

ಸಮಿತಿಯ ಸಿದ್ದೀಕ್ ಕಂದಕ್, ಅಶ್ರಫ್ ಕಂದಕ್, ಆರೀಫ್ ಕಂದಕ್, ಅಲ್ತಾಫ್ ಕೆ.ಪಿ., ಹಕೀಂ ಉಸ್ಮಾನ್, ಯುವ ಶಕ್ತಿಯ ಸದಸ್ಯರಾದ ಕಾರ್ತಿಕ್, ಸಂತೋಷ್, ಹರೀಶ್, ಸುಕೇತ್, ಕಮಲ್, ಶರಣ್, ಅರುಣ್ ಉಪಸ್ಥಿತರಿದ್ದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News