×
Ad

ಜು. 30ರಂದು ಕಲ್ಲಡ್ಕ ಝಮಾನ್ ಬಾಯ್ಸ್ ವತಿಯಿಂದ ರಕ್ತದಾನ ಶಿಬಿರ

Update: 2023-07-28 18:59 IST

ಬಂಟ್ವಾಳ : ಕಲ್ಲಡ್ಕ ಝಮಾನ್ ಬಾಯ್ಸ್ ಇದರ ಆಶ್ರಯದಲ್ಲಿ ಬ್ಲಡ್‌ ಡೋನರ್ಸ್ ಮಂಗಳೂರು ಹಾಗೂ ಫಾದರ್ ಮುಲ್ಲರ್ ಆಸ್ಪತ್ರೆ ಮಂಗಳೂರು ಇವುಗಳ ಸಹಕಾರದೊಂದಿಗೆ ಮರ್ಹೂಂ ಬಿ.ಕೆ ಇದ್ದಿನಬ್ಬ ಸ್ಮರಣಾರ್ಥ ಸೌಹಾರ್ದ ರಕ್ತದಾನ ಶಿಬಿರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ಜುಲೈ 30 ರಂದು ಕಲ್ಲಡ್ಕದ ಗಂಗಾಧರ ಸಂಕೀರ್ಣದಲ್ಲಿ ನಡೆಯಲಿದೆ.

ಶಿಬಿರವನ್ನು ಕಲ್ಲಡ್ಕ ಮುಹಿಯದ್ದೀನ್ ಜುಮಾ ಮಸೀದಿ ಮುದರ್ರಿಸ್ ಉಸ್ಮಾನ್ ದಾರಿಮಿ, ಉದ್ಘಾಟಿಸಲಿದ್ದು ಕಲ್ಲಡ್ಕ ಝಮಾನ್ ಬಾಯ್ಸ್ ಅಧ್ಯಕ್ಷ ಮಹಮ್ಮದ್ ಸಜ್ಜಾದ್ ಅಧ್ಯಕ್ಷತೆ ವಹಿಸುವರು.

ಮುಖ್ಯ ಅತಿಥಿಗಳಾಗಿ ಕರ್ನಾಟಕ ವಿಧಾನಸಭಾ ಸಭಾಧ್ಯಕ್ಷ ಯು.ಟಿ ಖಾದರ್, ಮಾಜಿ ಸಚಿವ ಬಿ. ರಮಾನಾಥ ರೈ, ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಮುಲ್ಕಿ, ಕಲ್ಲಡ್ಕ ಗಂಗಾಧರ ಸಂಕೀರ್ಣದ ಮಾಲಕ ಶಾಂತರಾಮ ಶೆಟ್ಟಿ, ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಎಸ್.ಡಿ.ಪಿ.ಐ. ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮಹಮ್ಮದ್ ತುಂಬೆ, ಮಂಗಳೂರು ಬ್ಲಡ್‌ ಡೋನರ್ಸ್ ಅಧ್ಯಕ್ಷ ನವಾಝ್ ನರಿಂಗಾನ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಝಮಾನ್ ಬಾಯ್ಸ್ ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News