×
Ad

ಬೊಳ್ಳಾರಿ : ಆಶೀರ್ವಾದ್ ಸೇವಾ ಸಂಘದ ಆಶ್ರಯದಲ್ಲಿ ʼಆಶೀರ್ವಾದ್ ಪ್ರೀಮಿಯರ್ ಲೀಗ್ ಸೀಸನ್ -3ʼ ಕ್ರಿಕೆಟ್ ಪಂದ್ಯಾಟ

Update: 2025-12-29 11:37 IST

ಬಂಟ್ವಾಳ : ಆಶೀರ್ವಾದ್ ಸೇವಾ ಸಂಘ ಬೊಳ್ಳಾರಿ ಇದರ ಅಶ್ರಯದಲ್ಲಿ ಆಶೀರ್ವಾದ್ ಪ್ರೀಮಿಯರ್ ಲೀಗ್ ಸೀಸನ್ -3 ಕ್ರಿಕೆಟ್ ಪಂದ್ಯಾಟ ರವಿವಾರ ನಡೆಯಿತು.

ಪತ್ರಕರ್ತ ಸಂತೋಷ್ ನೆತ್ತರಕೆರೆ ಅವರು ಪಂದ್ಯಾಟವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಸದಸ್ಯ ಗಣೇಶ್ ಸುವರ್ಣ ತುಂಬೆ, ಶ್ರೀ ಶಾರದಾ ಪೂಜಾ ರಜತ ಮಹೋತ್ಸವ ಸಮಿತಿಯ ಅಧ್ಯಕ್ಷ ರಾಘವ ಬಂಗೇರ ಪೆರ್ಲಬೈಲು, ಸಾಮಾಜಿಕ ಕಾರ್ಯಕರ್ತ ಜಗದೀಶ ಪೂಜಾರಿ ಕುಮ್ಡೇಲ್, ಪ್ರಮುಖರಾದ ದಿವಾಕರ ಪೆರ್ಲಬೈಲು, ನಾರಾಯಣ್ ಕಿರೋಡಿಯನ್, ಸುಧಾಕರ ಕೊಟ್ಟಿಂಜ, ಗೋಪಾಲ್ ಬೊಳ್ಳಾರಿ, ಪ್ರದೀಪ್ ಕುಮಾರ್ ಮೂದಲ್ಮೆ, ಅಶೋಕ್ ಕೊಂಡಣ, ಪ್ರಿಯಾ ಸತೀಶ್, ಜಾಲಜಾಕ್ಷಿ ಕೋಟ್ಯಾನ್, ದೀಪಕ್ ಬೊಳ್ಳಾರಿ, ದಯಾನಂದ ಬೊಳ್ಳಾರಿ, ಭವಾನಿ ಶಂಕರ್ ಮತ್ತಿತರರು ಉಪಸ್ಥಿತರಿದ್ದರು.

ಸಂದೀಪ್ ಕುಲಾಲ್ ಸ್ವಾಗತಿಸಿ, .ವಿನೋದ್ ಬೊಳ್ಳಾರಿ ವಂದಿಸಿದರು. ಸುಶಾನ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News