×
Ad

ಜ.1 ರಂದು ಕೇರಳ ಯಾತ್ರೆ ಗೆ ಉಳ್ಳಾಲದಲ್ಲಿ ಚಾಲನೆ

Update: 2025-12-29 11:56 IST

ಉಳ್ಳಾಲ :"ಮನುಷ್ಯರೊಂದಿಗೆ" ಎಂಬ ಧ್ಯೇಯವಾಕ್ಯದಲ್ಲಿ  ಕೇರಳ ಮುಸ್ಲಿಂ ಜಮಾಅತ್ ರಾಜ್ಯ ಸಮಿತಿ ಆಯೋಜಿಸಿರುವ ಕೇರಳ ಯಾತ್ರೆಯು ಜ. 1ರಂದು ಉಳ್ಳಾಲ ದರ್ಗಾ ಝಿಯಾರತ್ ನೊಂದಿಗೆ ಪ್ರಾರಂಭವಾಗಲಿದೆ ಎಂದು ದರ್ಗಾ ಅಧ್ಯಕ್ಷ ಹನೀಫ್ ಹಾಜಿ ಹೇಳಿದರು.

ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂಡಿಯನ್ ಗ್ರಾಂಡ್ ಮುಫ್ತಿ, ಉಳ್ಳಾಲ ದರ್ಗಾ ಸಂಯುಕ್ತ ಜಮಾಅತ್ ಖಾಝಿ ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಅವರು ಈ ಯಾತ್ರೆಯ ನೇತೃತ್ವ ವಹಿಸಲಿದ್ದಾರೆ.

ಧಾರ್ಮಿಕ ಸೌಹಾರ್ದತೆ, ಮಾನವೀಯ ಏಕತೆ ಮತ್ತು ಭಾವೈಕ್ಯತೆಯನ್ನು ಸಾರುವ ಈ ಯಾತ್ರೆಗೆ ಕೇರಳದ 17 ಕೇಂದ್ರಗಳಲ್ಲಿ ಸ್ವಾಗತ ಸಮಾರಂಭಗಳು ನಡೆಯಲಿವೆ. ಬದ್ರುಸ್ಸಾದಾತ್ ಸಯ್ಯಿದ್ ಇಬ್ರಾಹಿಂ ಖಲೀಲ್ ತಂಙಳ್ ಬುಖಾರಿ ಹಾಗೂ ಪೇರೋಡ್ ಅಬ್ದುಲ್ ರಹ್ಮಾನ್ ಸಖಾಫಿ ಅವರು ಉಪನಾಯಕರಾಗಲಿದ್ದಾರೆ. ಸಯ್ಯಿದ್ ಅಲಿ ಬಾಫಖಿ ತಂಙಳ್ ಝಿಯಾರತ್‌ಗೆ ನೇತೃತ್ವ ನೀಡಲಿದ್ದಾರೆ. ಕೆ.ಎಸ್. ಆಟಕೋಯ ತಂಙಳ್ ಕುಂಬೋಲ್ ಸಮಸ್ತದ ತ್ರಿವರ್ಣ ಧ್ವಜವನ್ನು ಜಾಥಾ ನಾಯಕರಿಗೆ ಹಸ್ತಾಂತರಿಸಲಿದ್ದಾರೆ. ಸ್ಪೀಕರ್ ಯು.ಟಿ. ಖಾದರ್ ಸಂದೇಶ ಭಾಷಣ ಮಾಡಲಿದ್ದಾರೆ ಎಂದರು.

ಕರ್ನಾಟಕ ರಾಜ್ಯ ಸುನ್ನೀ ಜಂಇಯ್ಯತುಲ್ ಉಲಮಾ ಅಧ್ಯಕ್ಷ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಜನರಲ್ ಸೆಕ್ರೆಟರಿ ಕೆ.ಪಿ. ಹುಸೈನ್ ಸಅದಿ ಕೆ.ಸಿ. ರೋಡ್, ಕರ್ನಾಟಕ ಮುಸ್ಲಿಂ ಜಮಾಅತ್ ಅಧ್ಯಕ್ಷ ಡಾ. ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ, ಪ್ರಧಾನ ಕಾರ್ಯದರ್ಶಿ ಮುಹಿಯುದ್ದೀನ್ ಕಾಮಿಲ್ ಸಖಾಫಿ, ಎಸ್‌ವೈಎಸ್ ರಾಜ್ಯಾಧ್ಯಕ್ಷ ಬಶೀರ್ ಸಅದಿ ಬೆಂಗಳೂರು, ಪ್ರಧಾನ ಕಾರ್ಯದರ್ಶಿ ಕೆ.ಎಂ. ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ, ಎಸ್‌ಎಸ್‌ಎಫ್ ರಾಜ್ಯಾಧ್ಯಕ್ಷ ಸುಫಿಯಾನ್ ಸಖಾಫಿ, ಪ್ರಧಾನ ಕಾರ್ಯದರ್ಶಿ ಅಲಿ ತುರ್ಕಳಿಕೆ, ಎಸ್‌ಜೆಎಂ ಅಧ್ಯಕ್ಷ ಎನ್.ಎಂ. ಅಬ್ದುರಹ್ಮಾನ್ ಮದನಿ ಜೆಪ್ಪು, ಪ್ರಧಾನ ಕಾರ್ಯದರ್ಶಿ ವಿ.ಕೆ. ಮುಹಮ್ಮದ್ ಮದನಿ, ಎಸ್‌ಎಂಎ ಅಧ್ಯಕ್ಷ ಸಯ್ಯದ್ ಇಸ್ಮಾಯಿಲ್ ತಂಙಳ್ ಉಜಿರೆ, ಸಂಯುಕ್ತ ಜಮಾಅತ್ ಅಧ್ಯಕ್ಷ ಸಯ್ಯದ್ ಅಬ್ದುಲ್ ರಹ್ಮಾನ್ ತಂಙಳ್ , ಕಾರ್ಯದರ್ಶಿ ಎಂ.ಪಿ.ಎಂ. ಅಶ್ರಫ್ ಸಅದಿ ಮಲ್ಲೂರು, ವೈ. ಅಬ್ದುಲ್ಲ ಕುಂಞಿ ಹಾಜಿ ಯೆನಪೊಯ, ಯು.ಕೆ. ಮೋನು ಹಾಜಿ ಕಣಚೂರು, ಡಾ. ಯು.ಟಿ. ಇಫ್ತಿಕಾರ್, ಹಾಜಿ ಎಸ್.ಎಂ. ರಶೀದ್, ಇನಾಯತ್ ಅಲಿ, ಬಿ.ಎಂ. ಫಾರೂಕ್, ಅಬೂಬಕ್ಕರ್ ಹಾಜಿ (ರೈಸ್ಕೋ), ಡಾ. ಅಬ್ದುಲ್ ರಶೀದ್, ಝೈನಿ ಕಾಮಿಲ್ ಸಖಾಫಿ, ಕೆ.ಎಸ್. ಮುಹಮ್ಮದ್ ಹಾಜಿ ಸಾಗರ್, ಶಾಕಿರ್ ಹಾಜಿ ಹೈಸಂ, ಅಬ್ದುಲ್ ನಾಸಿರ್ ಲಕ್ಕಿ ಸ್ಪಾರ್, ಎಸ್.ಕೆ. ಖಾದರ್ ಹಾಜಿ, ತೌಫೀಕ್ ಅಬ್ದುಲ್ಲ ಹಾಜಿ , ಮತ್ತಿತರರು ಭಾಗವಹಿಸಲಿದ್ದಾರೆ. ಯಾತ್ರೆಗೆ ದರ್ಗಾ ಸಮಿತಿಯ ನೇತೃತ್ವದಲ್ಲಿ ವಿಶೇಷ ಸ್ವಾಗತ ಸಮಾರಂಭವನ್ನು ಆಯೋಜಿಸಲಾಗುತ್ತದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ದರ್ಗಾ ಸಮಿತಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶಿಹಾಬುದ್ದೀನ್ ಸಖಾಫಿ , ಕೋಶಾಧಿಕಾರಿ ನಾಝಿಂ ರಹ್ಮಾನ್ ಕಾರ್ಯದರ್ಶಿ ಮುಸ್ತಫಾ ಮದನಿ ನಗರ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News