ಕುದ್ರೋಳಿ ಜಾಮಿಯಾ ಮಸೀದಿಯ ವಾರ್ಷಿಕ ಮಹಾಸಭೆ; ಕೆ.ಎಸ್. ಮುಹಮ್ಮದ್ ಮಸೂದ್ ಐದನೇ ಬಾರಿ ಅಧ್ಯಕ್ಷರಾಗಿ ಅವಿರೋಧ ಆಯ್ಕೆ
Update: 2025-12-29 14:40 IST
ಮಂಗಳೂರು : ಕುದ್ರೋಳಿ ಜಾಮಿಯಾ ಮಸೀದಿಯ ಐದನೇ ವಾರ್ಷಿಕ ಮಹಾ ಸಭೆಯು ಮಸೀದಿಯ ಕೆಳ ಅಂತಸ್ತಿನ ಸಭಾಂಗಣದಲ್ಲಿ ಡಿ. 28 ರವಿವಾರ ನಡೆಯಿತು.
ಸಭೆಯ ನಂತರ ಮುಂದಿನ ಮೂರು ವರ್ಷಕ್ಕೆ ನೂತನ ಕಮಿಟಿಯನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಮಾಜಿ ವಿಧಾನ ಪರಿಷತ್ ಸದಸ್ಯರು ಹಾಗೂ ಕರ್ನಾಟಕ ರಾಜ್ಯ ಸರಕಾರದ ಮಾಜಿ ಮುಖ್ಯ ಸಚೇತಕರಾದ ಅಲ್ ಹಾಜ್ ಕೆ ಎಸ್ ಮೊಹಮ್ಮದ್ ಮಸೂದ್ ರವರು ಐದನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಹಾಜಿ ಮಕ್ಬೂಲ್ ಅಹಮದ್, ಕಾರ್ಯದರ್ಶಿಯಾಗಿ ಹಾಜಿ ಎಸ್.ಎ ಖಲೀಲ್, ಜೊತೆ ಕಾರ್ಯದರ್ಶಿಯಾಗಿ ಆಸಿಫ್ ಸರ್ಫುದ್ದೀನ್, ಕೋಶಾಧಿಕಾರಿಯಾಗಿ ಶೇಖ್ ತಜ್ಮುಲ್ ಹುಸೈನ್ ಹಾಗೂ ಸದಸ್ಯರುಗಳಾಗಿ ಡಾ. ಮೊಹಮ್ಮದ್ ಆರೀಫ್ ಮಸೂದ್, ಎಸ್. ಸಲೀಂ, ಅಬ್ದುಲ್ ಖಾಲಿಕ್ ಎಸ್, ಅಶ್ಫಾಕ್ ಅಹ್ಮದ್, ಝಾಹೀದ್ ಎಂ.ಎಸ್, ಅಕ್ತರ್ ಹುಸೈನ್ ರವರನ್ನು ಆಯ್ಕೆ ಮಾಡಲಾಯಿತು.