×
Ad

ಕಾರ್ಕಳ ವಿಧಾನಸಭಾ ಕ್ಷೇತ್ರದ ನಿಂಜೂರು ಗ್ರಾಮದ ಬೂತ್ ಸಮಿತಿಯ ಸಭೆ

Update: 2025-07-01 15:57 IST

ಕಾರ್ಕಳ : ಕಾರ್ಕಳ ವಿಧಾನಸಭಾ ಕ್ಷೇತ್ರದ ನಿಂಜೂರು ಗ್ರಾಮದ ಬೂತ್ ಸಮಿತಿಯ ಸಭೆಯು ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ವಿಲ್ಸನ್ ಲೋಬೊ ಅವರ ಅಧ್ಯಕ್ಷತೆಯಲ್ಲಿ ಬೂತ್ ಸಂಖ್ಯೆ-63 ಸಮಿತಿಯ ಸೇವಾದಳದ ಅಧ್ಯಕ್ಷರಾದ ನಿಂಜೂರು ಪಾತಾವು ರೋನಾಲ್ಡ್ (ರೋನಿ) ಡಿಸೋಜ ಅವರ ಹಾಲ್ ನಲ್ಲಿ ನಡೆಯಿತು.

ಬೈಲೂರು ಜಿಲ್ಲಾ ಪಂಚಾಯತ್ ಕಾಂಗ್ರೆಸ್ ಪಕ್ಷದ ಉಸ್ತುವಾರಿ, ರಾಜ್ಯ ಕೃಷಿ ಘಟಕದ ಕಾರ್ಯದರ್ಶಿ, ಕುಕ್ಕುಂದೂರು ಗ್ರಾಮ ಪಂಚಾಯತ್ ಸದಸ್ಯರಾದ ಉದಯ್ ಶೆಟ್ಟಿ ಕುಕ್ಕುಂದೂರು ಅವರು ಪಕ್ಷ‌ ಸಂಘಟನೆಯ ಬಗ್ಗೆ ಮಾರ್ಗದರ್ಶನ ಮಾಡಿದರು ಹಾಗೂ ನೇಮಕ ಮಾಡಿದ ಬೂತ್ ಸಮಿತಿಯ ವಿವಿಧ ಘಟಕಗಳ ನೂತನ ಅಧ್ಯಕ್ಷರ ಜವಾಬ್ದಾರಿಯನ್ನು‌‌ ತಿಳಿಸಿದರು.

ನಂತರ ಪಕ್ಷದ ಕಾರ್ಯಕರ್ತರ ಹಾಗೂ ಸ್ಥಳೀಯ ಸಮಸ್ಯೆಗಳನ್ನು ಆಲಿಸಿ, ಕಾಂಗ್ರೆಸ್ ಮುಖಂಡ ಉದಯ ಕುಮಾರ್ ಶೆಟ್ಟಿ ಮುನಿಯಾಲು ಹಾಗೂ ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷ ಶುಭದ್ ರಾವ್ ಅವರಿಗೆ ತಿಳಿಸಿ ಸೂಕ್ತ ಪರಿಹಾರವನ್ನು ಆದಷ್ಟು ಬೇಗ ನೀಡುವ  ಭರವಸೆಯನ್ನು ನೀಡಿದರು.

ಕಾರ್ಕಳ ಬ್ಲಾಕ್ ಹಿಂದುಳಿದ ವರ್ಗ ಘಟಕದ ಅಧ್ಯಕ್ಷ ಅನಿಲ್ ಪೂಜಾರಿ ಹಾಗು ಕಾರ್ಕಳ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷರಾದ ರೆಹಮುತುಲ್ಲ ಸಮಯೋಚಿತವಾಗಿ ಮಾತನಾಡಿದರು.

ವೇದಿಕೆಯಲ್ಲಿ ಬೈಲೂರು ಜಿಲ್ಲಾ ಪಂಚಾಯತ್ ಕಾಂಗ್ರೆಸ್ ಜತೆ ಉಸ್ತುವಾರಿ ಅಂತೋನಿ ಮಿರಾಂದ, ಕಾಂಗ್ರೆಸ್ ಹಿರಿಯ ಸ್ಥಳೀಯ ನಾಯಕರಾದ, ಪಳ್ಳಿ - ನಿಂಜೂರು ಗ್ರಾಮೀಣ ಕಾಂಗ್ರೆಸ್ ಸಮಿತಿ ಕೃಷಿ ಘಟಕದ ಅಧ್ಯಕ್ಷ ಸುಬ್ಬಯ್ಯ ಶೆಟ್ಟಿ, ಮಾಜಿ ಮಂಡಲ ಪ್ರಧಾನರಾದ ಚಂದ್ರಶೇಖರ ಶೆಟ್ಟಿ, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ವಿಶ್ವನಾಥ ಭಂಡಾರಿ, ಬೂತ್ ಅಧ್ಯಕ್ಷ ಸಂತೋಷ್ ಪೂಜಾರಿ, ಪಳ್ಳಿ- ನಿಂಜೂರು ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷ ಸುಜೀತ್ ಪೂಜಾರಿ ಹಾಗೂ ಸೇವಾದಳದ ಬೂತ್ ಅಧ್ಯಕ್ಷ ರೋನಾಲ್ಡ್ ಡಿಸೋಜಾ ಮೊದಲಾದವರು ಉಪಸ್ಥಿತರಿದ್ದರು.

ಪಳ್ಳಿ ಬೂತ್ ಸಂಖ್ಯೆ- 123ರ ಅಧ್ಯಕ್ಷರಾದ ಪ್ರಶಾಂತ್ ಶೆಟ್ಟಿ, ನಿಂಜೂರು ಬೂತ್-63 ಸಮಿತಿಯ ಸದಸ್ಯರೆಲ್ಲರೂ ಹಾಗು ಸ್ಥಳೀಯ ಕಾಂಗ್ರೆಸ್ ನಾಯಕರು ಹಾಗೂ ಸಕ್ರೀಯ ಕಾರ್ಯಕರ್ತರು ಸಭೆಯಲ್ಲಿ ಉಪಸ್ಥಿತರಿದ್ದರು. ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಉಪಾಧ್ಯಕ್ಷರಾದ ದಿನಕರ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು, ಕಾರ್ಕಳ ಗ್ಯಾರಂಟಿ ಸಮಿತಿಯ ಸದಸ್ಯರಾದ ಸಂತೋಷ್ ಶೆಟ್ಟಿ ನಿಂಜೂರು ಧನ್ಯವಾದವಿತ್ತರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News