×
Ad

ಕರಾವಳಿ ಮೀನು ಮಾರುಕಟ್ಟೆ ರಾಜ್ಯಾದ್ಯಂತ ವಿಸ್ತರಣೆ: ಸಚಿವ ಮಾಂಕಾಳ ಎಸ್ ವೈದ್ಯ

Update: 2023-07-28 22:46 IST

ಮಂಗಳೂರು: ಕರಾವಳಿಯ ಮೀನು ಮಾರುಕಟ್ಟೆ ರಾಜ್ಯಾದ್ಯಂತ ವಿಸ್ತರಣೆ ಗೆ ಯೋಜನೆ ಅನುಷ್ಠಾನಗೊಳ್ಳಲಿದೆ ಎಂದು ಮೀನುಗಾರಿಕೆ ಸಚಿವ ಮಾಂಕಾಳ ಎಸ್.ವೈದ್ಯ ತಿಳಿಸಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈಗಾಗಲೇ ರೂಪಿಸಲಾದ ಯೋಜನೆ ಯಿಂದ ಕರಾವಳಿಯ ಮೀನು ಮಾರಕಟ್ಟೆ ವಿಸ್ತರಣೆ ಗೊಳ್ಳಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮತ್ಸೃವಾಹಿನಿ ಯೋಜನೆಯಡಿ ಮೀನುಗಾರರ ಸ್ವಾವಲಂಬಿ ಬದುಕಿಗೆ ಪೂರಕವಾಗಿ 150 ತ್ರಿಚಕ್ರ ವಾಹನಗಳನ್ನು ಬೆಂಗಳೂರು ಮತ್ತು ಮೈಸೂರು ನಲ್ಲಿ ವಿತರಣೆ ಆರಂಭಗೊಂಡಿದ್ದು, ಮುಂದಿನ ತಿಂಗಳು ಇತರ ಜಿಲ್ಲೆಗಳಲ್ಲಿ 100 ವಾಹನಗಳನ್ನು ವಿತರಿಸಲಾಗುವುದು ಎಂದು ಮೀನುಗಾರಿಕೆ ಸಚಿವ ಮಾಂಕಾಳ ಎಸ್.ವೈದ್ಯ ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಮೀನುಗಾರರಿಗೆ ಡೀಸೆಲ್ ಸಬ್ಸಿಡಿಯನ್ನು ಆಗಸ್ಟ್‌ನಲ್ಲಿ ವಿತರಿಸಲಾಗುವುದು ಎಂದರು. ಕಡಲ್ಕೊರೆತ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಯೋಜನೆ ರೂಪಿಸಲು ಅಧ್ಯಯನ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News