×
Ad

ವರ್ಲ್ಡ್ ಕಾಂಗ್ರೆಸ್ ಆಫ್ ಎಮರ್ಜನ್ಸಿ ಮೆಡಿಸಿನ್ ನಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಡಾ. ಹಾರೂನ್ ಹುಸೇನ್

Update: 2025-10-15 13:38 IST

ಮಂಗಳೂರು: ಪುದುಚೇರಿಯಲ್ಲಿ ಇತ್ತೀಚೆಗೆ ನಡೆದ ವರ್ಲ್ಡ್ ಕಾಂಗ್ರೆಸ್ ಆಫ್ ಎಮರ್ಜೆನ್ಸಿ ಮೆಡಿಸಿನ್ ನಲ್ಲಿ ಮಂಗಳೂರಿನ ಕೆಎಂಸಿ ಆಸ್ಪತ್ರೆಯ ತಜ್ಞ ವೈದ್ಯ ಡಾ. ಎಚ್.ಹಾರೂನ್ ಹುಸೇನ್ ಅವರು ಸಂಪನ್ಮೂಲ ವ್ಯಕ್ತಿ ಹಾಗೂ ಉಪನ್ಯಾಸಕರಾಗಿ ಭಾಗವಹಿಸಿದ್ದರು.

ವಿಶ್ವಾದ್ಯಂತದ ತುರ್ತು ವೈದ್ಯಕೀಯ ತಜ್ಞರನ್ನು ಒಗ್ಗೂಡಿಸಿದ ಈ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಡಾ.ಹಾರೂನ್ ಹುಸೇನ್, ವೈದ್ಯ ವೃತ್ತಿ ಕೇವಲ ರೋಗಿಗಳನ್ನು ಚಿಕಿತ್ಸೆ ನೀಡುವುದಲ್ಲ. ನಿರಂತರವಾಗಿ ಕಲಿಯುವುದು, ಮಾಹಿತಿ ಹಾಗೂ ಜ್ಞಾನವನ್ನು ಹಂಚಿಕೊಳ್ಳುವುದು ಮತ್ತು ಸಹಯೋಗದ ಮೂಲಕ ಆರೋಗ್ಯಕರ ನಾಳೆಯನ್ನು ನಿರ್ಮಿಸುವುದೇ ವೈದ್ಯಕೀಯದ ನಿಜವಾದ ಅರ್ಥ ಎಂದು ಹೇಳಿದರು.

ಅತ್ಯುತ್ತಮ, ಅನುಭವಿ ತಜ್ಞ ವೈದ್ಯರೊಂದಿಗೆ ವಿಚಾರ ವಿನಿಮಯ ಮಾಡಿಕೊಂಡು ಕಲಿಯುವ ಅವಕಾಶ ದೊರೆತಿದ್ದು ಅತ್ಯಂತ ಸಮೃದ್ಧ ಅನುಭವವಾಗಿತ್ತು. ಈ ಅವಕಾಶ ಒದಗಿಸಿದ ಆಯೋಜಕರಿಗೆ ಹೃತ್ಪೂರ್ವಕ ಧನ್ಯವಾದಗಳು ಎಂದು ಅವರು ನುಡಿದರು.

ಮೂಲತಃ ಹಾಸನದವರಾಗಿರುವ ತಜ್ಞ ವೈದ್ಯ ಡಾ.ಎಚ್.ಹಾರೂನ್ ಹುಸೇನ್ ಅವರು ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಇಂಟರ್ನಲ್ ಮೆಡಿಸಿನ್ ನ ಕನ್ಸಲ್ಟಂಟ್ ಆಗಿದ್ದಾರೆ. ಅವರು ಜೆರಿಯಾಟ್ರಿಕ್ ಸೊಸೈಟಿ ಆಫ್ ಇಂಡಿಯಾದ ಕಾರ್ಯಕಾರಿ ಸಮಿತಿಯ ಸದಸ್ಯರೂ ಆಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News