ಮಂಗಳೂರು | ಗಾಂಜಾ ಸೇವನೆ: ಆರೋಪಿಯ ಬಂಧನ
Update: 2025-12-05 00:43 IST
ಸಾಂದರ್ಭಿಕ ಚಿತ್ರ
ಮಂಗಳೂರು, ಡಿ.4: ವರ್ಷದ ಹಿಂದೆ ಎನ್‌ಡಿಪಿಎಸ್ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಅದ್ಯಪಾಡಿ ನಿವಾಸಿ ಮಹೇಂದ್ರ ಪೈ (35) ಎಂಬಾತನನ್ನು ಕಾವೂರು ಪೊಲೀಸರು ಗುರುವಾರ ಠಾಣೆಗೆ ಕರೆಸಿಕೊಂಡಿದ್ದರು.
ಈ ವೇಳೆ ಆತ ಮಾದಕ ವಸ್ತುವನ್ನು ಸೇವಿಸಿದ್ದಾನೆಯೇ ಎಂದು ಪತ್ತೆ ಹಚ್ಚಲು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಆತ ಮತ್ತೆ ಗಾಂಜಾ ಸೇವಿಸಿ ಬಂದಿರುವುದಾಗಿ ವರದಿಯಾಗಿದೆ.
ಈ ಸಂಬಂಧ ಆರೋಪಿ ಮಹೇಂದ್ರ ಪೈ ವಿರುದ್ಧ ಕಾವೂರು ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಮತ್ತೊಂದು ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.