×
Ad

ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಟ ಪ್ರಕರಣ: ಎಂಟು ಮಂದಿ ಸೆರೆ

Update: 2024-08-16 21:09 IST

ಸಾಂದರ್ಭಿಕ ಚಿತ್ರ

ಮಣಿಪಾಲ, ಆ.16: ಮಣಿಪಾಲ ಜಿಲ್ಲಾಧಿಕಾರಿ ರಸ್ತೆಯಲ್ಲಿರುವ ಪೋಲಾರ್ ಬೀರ್ ಐಸ್‌ಕ್ರೀಂ ಪಾರ್ಲರ್ ಎದುರುಗಡೆ ಆ.15ರಂದು ಸಾರ್ವಜನಿಕ ಸ್ಥಳದಲ್ಲಿ ಗಲಾಟೆ ಮಾಡುತ್ತಿದ್ದ ಎಂಟು ಮಂದಿಯನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.

ಪರೀಕ್ಷಿತ್ ಕುಮಾರ್, ಹೇಮಂತ್ ಕುಮಾರ, ಅಭಿಷೇಕ್, ಸುಮಂತ್, ಪ್ರಜ್ವಲ್, ಶರತ್ ಕುಮಾರ್, ಸಯ್ಯದ್ ಶಾನ್, ಅನಿಲ್ ಕುಮಾರ ಎಂಬವರು ಪರಸ್ಪರ ಕೈಯಿಂದ ಹೊಡೆದಾಡಿಕೊಂಡು ಜಗಳವಾಡಿ ಸಾರ್ವಜನಿಕ ನೆಮ್ಮದಿಯನ್ನು ಹಾಳು ಮಾಡುತ್ತಿದ್ದು, ಕೂಡಲೇ ಸ್ಥಳಕ್ಕೆ ಆಗಮಿಸಿದ ಎಲ್ಲ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News