×
Ad

ಗಲ್ಲಿ ಪ್ರೀಮಿಯರ್ ಲೀಗ್ ಕಂದಕ್ ಸೀಸನ್-5 | ಕಂದಕ್ ವಾರಿಯರ್ಸ್ ಚಾಂಪಿಯನ್

Update: 2026-01-07 14:54 IST

ಮಂಗಳೂರು : ದಿ ಸರೋಜಿನಿ ಪುಂಡಲೀಕ ಕರ್ಕೇರ ಬೆಂಗರೆ ಸ್ಮರಣಾರ್ಥ ಗಲ್ಲಿ ಪ್ರೀಮಿಯರ್ ಲೀಗ್ ಕಂದಕ್ ಸೀಸನ್-5 ಫೈನಲ್ ಪಂದ್ಯದಲ್ಲಿ ಕಂದಕ್ ವಾರಿಯರ್ಸ್‌ ತಂಡ ಕಂದಕ್ ನೈಟ್ ರೈಡರ್ಸ್ ತಂಡವನ್ನು ಭರ್ಜರಿಯಾಗಿ ಜಯ ಗಳಿಸುವುದರ ಮೂಲಕ ಪ್ರಥಮ ಪ್ರಶಸ್ತಿ ಮುಡಿಗೇರಿಸಿತು. ಕಂದಕ್ ವಾರಿಯರ್ಸ್ ತಂಡವು ಕಳೆದೆ ಎರಡು ಬಾರಿ ರನ್ನರ್ ಆಗಿತ್ತು ಈ ಬಾರಿ ಪ್ರಶಸ್ತಿ ಗಳಿಸುವಲ್ಲಿ ಯಶಸ್ವಿಯಾಯಿತು.

ಟೂರ್ನಿಯಲ್ಲಿ ಅಮೋಘ ಪ್ರದರ್ಶನ ತೋರಿ ವಾರಿಯರ್ಸ್‌ ತಂಡ ಜಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಆಲ್ ರೌಂಡರ್ ಆಟಗಾರ ಜಾಫರ್ ಸಾಧಿಕ್ ಉತ್ತಮ ದಾಂಡಿಗ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿ ಬಾಚಿಕೊಂಡರು.

ಫೈನಲ್ ಪಂದ್ಯದಲ್ಲಿ ಕಠಿಣ ದಾಳಿ ಸಂಘಟಿಸಿದ ವಾರಿಯರ್ಸ್ ತಂಡದ ನಾಯಕ ಝಾಹೀರ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.

ಜೂನಿಯರ್ ವಿಭಾಗದಲ್ಲಿ ಪ್ರಥಮ ಬಾರಿ ಫೈನಲ್ ಧಾವಿಸಿದ ಕಂದಕ್ ಸೂಪರ್ ಕಿಂಗ್ಸ್ ಚಾಂಪಿಯನ್ ಹಾಗೂ ರನ್ನರ್ ಆಗಿ ಕಂದಕ್ ಯುನೈಟೆಡ್‌, ಸೀನಿಯರ್ ವಿಭಾಗದಲ್ಲಿ ದ್ವೀತಿಯ ಬಾರಿ ಫೈನಲ್ ಪ್ರವೇಶಿಸಿ ಕಳೆದ ಬಾರಿಯ ಎದುರಾಳಿಯನ್ನು ಮತ್ತೆ ಸೋಲಿಸಿ ಪ್ರಶಸ್ತಿ ಮುಡಿಗೇರಿಸಿತು.

ಹತ್ತು ದಿನಗಳ ವಿಜೃಂಭಣೆಯಿಂದ ಕಣ್ತುಂಬಿ ಜನರಿಗೆ ಮೆರಗು ನೀಡಿದ ಜಿ.ಪಿ.ಎಲ್ ಜನವರಿ 4ರಂದು ತೆರೆಗೊಂಡಿತು.

ಪ್ರಶಸ್ತಿ ಸಮಾರಂಭದಲ್ಲಿ ಗಣ್ಯ ಅತಿಥಿಗಳ ಮೂಲಕ ಮಂಗಳೂರಿನ ಪ್ರತಿಷ್ಠಿತ ಅಂಡರ್ ಆರ್ಮ್ ಕ್ರಿಕೆಟ್ ನಲ್ಲಿ ಹೊಯಿಗೆ ಬಜಾರ್ ಕ್ಲಬ್ ನ ಸದಸ್ಯತ್ವ ಹೊಂದಿದ ರಿಲಯನ್ಸ್ ಕಾಟಿಪಳ್ಳ ತಂಡದಲ್ಲಿ ಆಡುತ್ತಿರುವ ಅನೀಶ್, ಶ್ರೇಯಾಸ್ ಸ್ಥಳೀಯ ಯುವ ಪ್ರತಿಭೆ ಪ್ರದೀಪ್ ಯು ಎಂ, ಉಳ್ಳಾಲ ಸ್ಪೋರ್ಟಿಂಗ್ ಇದರ ಅದ್ಯಕ್ಷರಾದ ಸಿದ್ದೀಕ್ ಉಳ್ಳಾಲ್, ಅಂಡರ್ ಆರ್ಮ್ ಕ್ರಿಕೆಟ್‌ ನ ವೀಕ್ಷಕ ವಿವರಣೆಗಾರ ಕಬೀರ್, ಎಂ. ಗಫೂರ್ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಎಂ.ಎ.ಗಪೂರ್, ಅಧ್ಯಕ್ಷರು, ಕರಾವಳಿ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸರಕಾರ, ಗಲ್ಲಿ ಪ್ರೀಮಿಯರ್ ಲೀಗ್ ಸ್ಥಾಪಕಧ್ಯಕ್ಷರು ಮತ್ತು ನಿಕಟ ಪೂರ್ವ ಪಾಲಿಕೆ ಸದಸ್ಯರಾದ ಅಬ್ದುಲ್ ಲತೀಫ್, ಅಶ್ವ ಡೆವೆಲಪ್ಮರ್ಸ್ ಸುಧಿನ್ ಕುಮಾರ್, ಇಂಜಿನಿಯರ್ ಅಶ್ವಿನ್, ಬುರ್ಖಾ ಫ್ಯಾಷನ್ ಮಾಲಕರಾದ ಎಸ್ ಎಂ ರಿಯಾಝ್, ಅಲ್ಟ್ರಾ ಮೈರೆನ್ ಅಫ್ತಾಬ್ ಬೋಳಾರ್, ಡಿ ಲೈಟ್ ಇನ್ ವೆಸ್ಟ್ಮೆಂಟ್ ಶಮೀರ್ ಕಂದಕ್, ಅನಿವಾಸಿ ಉದ್ಯಮಿ ಶರೀಫ್ ಕಂದಕ್, ಸನ್ಮಾರ್ಗ ಪತ್ರಿಕೆಯ ಮೊಶಿನ್, ಡೈಕಿನ್ ಫೀಶರೀಸ್ ಮಾಲಕರಾದ ಬಿ ಇದ್ದಿನ್ ಕುಂಙಿ, ತಂಡದ ನಾಯಕರು ಉಪಸ್ಥಿತರಿದ್ದರು.

ಕಾರ್ಯಕ್ರಮದ ನಿರೂಪಣೆಯಾಗಿ ಕಬೀರ್ ಕುದ್ರೋಳಿ ಮತ್ತು ರಾಬಿನ್ ಎಮ್ಮೆಕರೆ ನಿರ್ವಹಿಸಿದರು.

ಟೂರ್ನಿಯ ಉದ್ದಕ್ಕೂ ಅಂಪೈರ್ ಆಗಿ ಅಶ್ವಿನ್, ಅನಿಶ್, ಶ್ರೇಯಾಸ್, ಹರ್ಷಿಲ್ ಇವರೊಂದಿಗೆ ವೀಕ್ಷಕ ವಿವರಣೆಗಾರ ರಾಗಿ ರಫೀಕ್ ಬೆಂಗ್ರೆ, ಕಬೀರ್ ಕುದ್ರೋಳಿ, ರಾಬಿನ್ ಮತ್ತು ಜಿಪಿಎಲ್ ನ ಸಿಬ್ಬಂದಿಯಾಗಿ ಸಹಕರಿಸಿದ ಕಮಿಟಿ ಸದಸ್ಯರಿಗೆ ಗೌರವಿಸಲಾಯಿತು.

 

 

 

 

 

 

 

 

 

 

 

 

 

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News