×
Ad

ಪೋಟ್ ವಾರ್ಡ್‌ನಲ್ಲಿ ಇಂದಿರಾ ಸೇವಾಕೇಂದ್ರ ಉದ್ಘಾಟನೆ

Update: 2023-07-19 20:13 IST

ಮಂಗಳೂರು: ಮಂಗಳೂರು ಮನಪಾ ವ್ಯಾಪ್ತಿಯ ೪೫ನೇ ಪೋರ್ಟ್ ವಾರ್ಡ್ ಕಾಂಗ್ರೆಸ್ ಮತ್ತು ಕೆಥೋಲಿಕ್ ಸಭಾ ರೊಸರಿಯೋ ಘಟಕದ ವತಿಯಿಂದ ಇಂದಿರಾ ಸೇವಾ ಕೇಂದ್ರ ಉದ್ಘಾಟನೆ ಮತ್ತು ವನಮಹೋತ್ಸವ ಕಾರ್ಯಕ್ರಮ ನಗರದ ರೋಸರಿಯೋ ಹಾಲ್‌ನಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಚರ್ಚ್‌ನ ಧರ್ಮಗುರು ಅಲ್ವಿನ್ ಪಿಂಟೋ, ಮಾಜಿ ಶಾಸಕರಾದ ಜೆಆರ್ ಲೋಬೋ ಐವನ್ ಡಿಸೋಜ, ಕಾರ್ಪೊರೇಟರ್ ಅಬ್ದುಲ್ ಲತೀಫ್ ಕಂದಕ್, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜೆ. ಸಲೀಂ. ಮೆಸ್ಕಾಂ ಅಧಿಕಾರಿ ಗಣೇಶ್, ಶರಣ್ ಸಲ್ಲುಧಾರ್ ಡಿಸೋಜ, ಸುಧಾಕರ್ ಶೆಣೈ, ಭಾಸ್ಕರ್ ರಾವ್, ಹಬೀಬುಲ್ಲಾ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News