×
Ad

ಬಂಟ್ವಾಳ ಕೆಳಗಿನ ಪೇಟೆಯಲ್ಲಿ ನೂತನ ಆರೋಗ್ಯ, ಕ್ಷೇಮ ಉಪ ಕೇಂದ್ರ ಉದ್ಘಾಟನೆ

Update: 2024-02-04 15:36 IST

ಬಂಟ್ವಾಳ : ದ.ಕ.ಜಿಲ್ಲಾ ಆರೋಗ್ಯ ಕೇಂದ್ರ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನದಲ್ಲಿ ಸಾರ್ವಜನಿಕ ಅನುಕೂಲಕ್ಕಾಗಿ ಬಂಟ್ವಾಳ ಕೆಳಗಿನ ಪೇಟೆಯ ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ ಇದರ ನೆಲ ಮಹಡಿಯಲ್ಲಿ ಆರೋಗ್ಯ ಮತ್ತು ಕ್ಷೇಮ ಉಪ ಕೇಂದ್ರ ಶುಭಾರಂಭಗೊಂಡಿತು.

ಸಮದ್ ಹುದವಿ ಪ್ರಾರ್ಥನೆ ನೆರವೇರಿಸಿ ಉದ್ಘಾಟಿಸಿದರು. ಸ್ಥಳೀಯ ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಕೇಂದ್ರದ ಸಿಬ್ಬಂದಿಗಳು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಸ್ಥಳೀಯ ಪುರಸಭಾ ಸದಸ್ಯ ಮೂನಿಷ್ ಆಲಿ, ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ ಕಾರ್ಯದರ್ಶಿ ಬಿ. ಮೊಹಮ್ಮದ್, ತೌಹೀದ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಇಬ್ರಾಹಿಂ ಸಲೀಂ ಶುಭ ಹಾರೈಸಿದರು.

ಬಂಟ್ವಾಳ ಜುಮ್ಮಾ ಮಸೀದಿ ಅಧ್ಯಕ್ಷ ಹಾಜಿ ಶಾಫಿ, ತೌಹೀದ್ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ಹಾಜಿ ರಹಿಮಾನ್, ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಇಫಾಝ್, ಶಾಲಾ ಕಾರ್ಯದರ್ಶಿ ಅಬ್ದುಲ್ ಖಾದರ್ ಮಾಸ್ಟರ್, ಅಂಗನವಾಡಿ ಶಿಕ್ಷಕಿ ಪೌಲಿನ್, ಆರೋಗ್ಯ ಕೇಂದ್ರದ ಸಂಧಿಕ, ಆಶಾ ಕಾರ್ಯಕರ್ತೆ ಶೋಭಾ, ಸ್ಥಳೀಯರಾದ ಉಬೈದುಲ್ಲಾ, ಇಸ್ಮಾಯಿಲ್, ಅಸ್ಲಾಂ ಹಾಗೂ ಆರೋಗ್ಯ ಕೇಂದ್ರದ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಮತ್ತು ಊರಿನ ನಾಗರಿಕರು ಉಪಸ್ಥಿತರಿದ್ದರು.

ಆರೋಗ್ಯ ಕೇಂದ್ರದ ಶ್ವೇತ ಸ್ವಾಗತಿಸಿ, ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News