×
Ad

ಕಿಸ್ವದ ಸಮುದಾಯ ಸೇವೆ ಎಲ್ಲರಿಗೂ ಮಾದರಿಯಾಗಲಿ: ಇನಾಯತ್ ಅಲಿ

Update: 2025-11-17 23:50 IST

ಜುಬೈಲ್: ಜೀವನ ಶೈಲಿಯ ಬದಲಾವಣೆಯಿಂದ ಸಮಾಜದಲ್ಲಿ ಜನರ ಅರೋಗ್ಯ ಸಮಸ್ಯೆಗಳು ಹೆಚ್ಚುತ್ತಿದೆ. ಅದರಲ್ಲೂ ವಿಶೇಷವಾಗಿ ಕಿಡ್ನಿ ಸಂಬಂಧಪಟ್ಟ ಸಮಸ್ಯೆಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಪ್ರಾಥಮಿಕ ಅರೋಗ್ಯ ಕೇಂದ್ರ ಮತ್ತು ಕಿಡ್ನಿ ಡಯಾಲಿಸಿಸ್ ಕೇಂದ್ರ ಸ್ಥಾಪನೆಗೆ ಕಿಸ್ವ ಮುಂದಾಗಿರುವುದು ಶ್ಲಾಘನೀಯ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಹೇಳಿದ್ದಾರೆ.

ಸೌದಿ ಅರೇಬಿಯಾದ ಜುಬೈಲ್‌ನಲ್ಲಿ ಕಿಸ್ವ ವತಿಯಿಂದ ನಡೆದ ಸನ್ಮಾನ ಸ್ವೀಕರಿಸಿ ಅವರು ಮಾತಾಡುತ್ತಿದ್ದರು.

ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತಾಡಿದ ಕಿಸ್ವದ ಸ್ಥಾಪಕ ಅಧ್ಯಕ್ಷ ಇಸ್ಮಾಯಿಲ್ ಎಚ್‌ಎನ್‌ಜಿಸಿ ಕಿಸ್ವದ ಮಹತ್ವಾಕಾಂಶೆಯಾದ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಕಿಡ್ನಿ ಡಯಾಲಿಸಿಸ್ ಕೇಂದ್ರದ ಯೋಜನೆಯನ್ನು ಶೀಘ್ರದಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದರು.

ಡಾ. ಇಫ್ತಿಕಾರ್ ಫರೀದ್ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಕಿಸ್ವ ಅಧ್ಯಕ್ಷ ಮುಬೀನ್ ಪ್ರಾಸ್ತಾವಿಕವಾಗಿ ಮಾತಾಡಿದರು. ವೇದಿಕೆಯಲ್ಲಿ ಕಬೀರ್ ಕೆ.ಎಂ., ಇಬ್ರಾಹಿಂ ರಾಕ , ಅಬೂಬಕ್ಕರ್ ಕನ್ನಡ ನಾಡು ಉಪಸ್ಥಿತರಿದ್ದರು.

ಮುಈಝ್ ಮುಹಮ್ಮದ್ ಕಿರಾಅತ್ ಪಠಿಸಿದರು. ಅಬ್ದುಲ್ ಕಾದರ್ ಬಾಂಬೆ ಸ್ವಾಗತಿಸಿದರು. ಕೆ.ಸಿ. ಮುಹಮ್ಮದ್ ಅಲಿ ಕಾರ್ಯಕ್ರಮ ನಿರೂಪಿಸಿದರು. ಬಿ.ಎ. ಅಬೂಸಾಲಿ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News