×
Ad

ಕೆಸಿಎಫ್ ಅಬುಧಾಬಿ ವತಿಯಿಂದ ಸ್ವಾತಂತ್ರ್ಯ ಸಂಭ್ರಮ

Update: 2023-08-15 23:23 IST

ಅಬುಧಾಬಿ: ಕರ್ನಾಟಕ ಕಲ್ಚರಲ್ ಫೌಂಡೇಶನ್ ಅಬುಧಾಬಿ ವತಿಯಿಂದ ಸ್ವಾತಂತ್ರ್ಯ ಸಂಭ್ರಮ ಕಾರ್ಯಕ್ರಮ ಕೆಸಿಎಫ್ ಆಡಿಟೋರಿಯಂನಲ್ಲಿ ನಡೆಸಲಾಯಿತು.

ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ ರಾಜ್ಯಾಧ್ಯಕ್ಷ ಹಾಫಿಝ್ ಸುಫ್ಯಾನ್ ಸಖಾಫಿ ಅಲ್ ಹಿಕಮಿ ಮಾತನಾಡಿ ವೈವಿದ್ಯತೆ ಭಾರತದ ಸೌಂದರ್ಯವಾಗಿದೆ. ಅದನ್ನು ಕಾಪಾಡುವುದು ಭಾರತೀಯರ ಕರ್ತವ್ಯವಾಗಿದೆ. ಎಪ್ಪತ್ತಾರು ವರ್ಷಗಳ ಕಾಲ ಹಲವು ವೈವಿದ್ಯತೆಗಳನ್ನು ಒಟ್ಟಾಗಿ ಕೊಂಡು ಹೋದ ಬಲಿಷ್ಠವಾದ ಸಂವಿಧಾನ ನಮಗಿದೆ. ಇಂತಹಾ ದೇಶದಲ್ಲಿ ಹುಟ್ಟಿ ಬೆಳೆದ ನಾವು ಸೌಭಾಗ್ಯವಂತರು. ಆದ್ದರಿಂದ ಪ್ರಪಂಚದಾದ್ಯಂತ ಇರುವ ಭಾರತೀಯರು ಎಲ್ಲಿದ್ದರೂ ಈ ದಿನ ಸಂಭ್ರಮ ದಿಂದ ಆಚರಿಸುತ್ತಾರೆ ಎಂದು ಹೇಳಿದರು.

ಕೆಸಿಎಫ್ ಅಬುಧಾಬಿ ಝೋನ್ ಅಧ್ಯಕ್ಷರಾದ ಹಸೈನಾರ್ ಅಮಾನಿ ಅಧ್ಯಕ್ಷತೆ ವಹಿಸಿದರು. ಕೆಸಿಎಫ್ ಅಬುಧಾಬಿ ಪ್ರಧಾನ ಕಾರ್ಯದರ್ಶಿ ಕಬೀರ್ ಬಯಂಬಾಡಿ ಸಂವಿಧಾನದ ಪೀಠಿಕೆಯನ್ನು ವಾಚಿಸಿದರು.

ಮಖ್‌ಬೂಲ್ ಅಮಾನಿ, ಶಿಹಾಬುದ್ದೀನ್ ಸುಳ್ಯ ರಾಷ್ಟ್ರಗೀತೆ ಹಾಡಿದರು. ಕೆಸಿಎಫ್ ರಾಷ್ಟ್ರೀಯ ಪಬ್ಲಿಕೇಶನ್ ಅಧ್ಯಕ್ಷ ಹಕೀಂ ತುರ್ಕಳಿಕೆ, ಅಲ್ ಹಾಜ್ ಮುಹಮ್ಮದ್ ಕುಂಞಿ, ಹಮೀದ್ ಮುಸ್ಲಿಯಾರ್ ಕುಪ್ಪೆಟ್ಟಿ, ಹಾರಿಸ್ ಸಅದಿ, ಇಂಜಿನಿಯರ್ ರಝಾಕ್ ಸಅದಿ ನಾವೂರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News