×
Ad

ವಿಟ್ಲ: ಜನಪ್ರಿಯ ಸೆಂಟ್ರಲ್ ಸ್ಕೂಲ್ ನಲ್ಲಿ ಸ್ವಾತಂತ್ರ್ಯೋತ್ಸವ ಸಂಭ್ರಮ

Update: 2023-08-15 19:28 IST

ವಿಟ್ಲ: ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಕಂಬಳಬೆಟ್ಟು ಮೊಹಿಯುದ್ದೀನ್ ಮತ್ತು ಇಬ್ರಾಹಿಂ ಜಮಾತ್ ಕಮಿಟಿ, ಮತ್ತು ಜನಪ್ರಿಯ ಸೆಂಟ್ರಲ್ ಸ್ಕೂಲ್ ಜಂಟಿ ಆಶ್ರಯದಲ್ಲಿ ಡ್ರಗ್ಸ್ ಮುಕ್ತ ಸಮಾಜಕ್ಕಾಗಿ ಜಾಗೃತಿ ಜಾಥ ಎಂಬ ಕಾರ್ಯಕ್ರಮ ಕಂಬಳಬೆಟ್ಟುವಿನಲ್ಲಿ ನಡೆಯಿತು.

ಬೆಳಗ್ಗೆ ಶಾಲೆಯಲ್ಲಿ ಜನಪ್ರಿಯ ಫೌಂಡೇಶನ್ ಚೇಯರ್ ಮ್ಯಾನ್ ಡಾ. ವಿ.ಕೆ ಅಬ್ದುಲ್ ಬಶೀರ್ ಅವರು ಧ್ವಜಾರೋಹಣ ಗೈದರು. ಶಾಲಾ ಆಡಳಿತ ಸಮಿತಿ ನಿರ್ದೇಶಕ ಡಾ. ಕಿರಾಶ್ ಪರ್ತಿಪ್ಪಾಡಿ, ನೌಷೀನ್ ಬದ್ರಿಯಾ, ಡಾ. ಸನ ಅಬೂಬಕ್ಕರ್, ಪ್ರಾಂಶುಪಾಲ ಲಿಬಿನ್ ಝೇವಿಯರ್, ಆಡಳಿತಾಧಿಕಾರಿ ಸಫ್ವಾನ್ ಪಿಲಿಕಲ್ ಭಾಗವಹಿಸಿದ್ದರು.

ಜಾಗೃತಿ ಜಾಥಾವು ಕಂಬಳಬೆಟ್ಟು ಶಾಂತಿನಗರ ಜಂಕ್ಷನ್ ನಿಂದ ಹೊರತು ಕಂಬಳಬೆಟ್ಟು ಸಾದತ್ ನಗರದ ವರೆಗೆ ಬಂದು ಜನ ಜಾಗೃತಿ ಸಭೆಯೊಂದಿಗೆ ಸಮಾಪ್ತಿಗೊಂಡಿತು.

ಮಸೀದಿ ಖತೀಬು ಇಬ್ರಾಹಿಂ ಮದನಿ ಅವರು ಕಾರ್ಯಕ್ರಮ ಉದ್ಘಾಟಿಸಿ, ಸಂದೇಶ ನೀಡಿದರು. ಜನಪ್ರಿಯ ಫೌಂಡೇಶನ್ ಚೇಯರ್ ಮ್ಯಾನ್ ಡಾ. ವಿ.ಕೆ ಅಬ್ದುಲ್ ಬಶೀರ್ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ಜಂಇಯ್ಯತುಲ್ ಫಲಾಹ್ ಅಧ್ಯಕ್ಷ ರಶೀದ್ ವಿಟ್ಲ, ಮಸೀದಿ ಆಡಳಿತ ಸಮಿತಿ ಉಪಾಧ್ಯಕ್ಷ ರಝಾಕ್ ಬಾಂಬೆ, ಮೊಹಮ್ಮೊದ್, ಪ್ರಧಾನ ಕಾರ್ಯದರ್ಶಿ ನಾಸೀರ್ ಕಂಬಳಬೆಟ್ಟು, ಜತೆ ಕಾರ್ಯದರ್ಶಿ ಯಾಸೀರ್, ಗಫೂರ್, ಕೋಶಾಧಿಕಾರಿ ಅಬೂಬಕ್ಕರ್, ಉಪಸ್ಥಿತರಿದ್ದರು.

ಸದರ್ ಹನೀಫ್ ಸಖಾಫಿ ಸ್ವಾಗತಿಸಿದರು. ಜನಪ್ರಿಯ ಶಾಲೆಯ ಆಡಳಿತ ಅಧಿಕಾರಿ ಸಫ್ವಾನ್ ಪಿಲಿಕಲ್, ನಿರೂಪಿಸಿ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News