×
Ad

ಮಂಗಳೂರು | ಆನ್‌ಲೈನ್‌ ಟ್ರೇಡಿಂಗ್‌ನಲ್ಲಿ 24 ಲಕ್ಷ ರೂ.ಕಳೆದುಕೊಂಡ ಹೂಡಿಕೆದಾರ

Update: 2025-06-07 21:21 IST

ಮಂಗಳೂರು : ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಿ ವ್ಯಕ್ತಿಯೋರ್ವರು 24 ಲಕ್ಷ ರೂ. ಕಳೆದುಕೊಂಡಿರುವ ಬಗ್ಗೆ ನಗರದ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾರ್ಚ್‌ನಲ್ಲಿ ತಾನು ಇನ್‌ಸ್ಟಾಗ್ರಾಂ ನೋಡುವಾಗ ಆನ್‌ಲೈನ್ ಟ್ರೇಡಿಂಗ್ ಕುರಿತ ಲಿಂಕ್ ಕಂಡು ಬಂದಿತ್ತು. ಅದನ್ನು ಕ್ಲಿಕ್ ಮಾಡಿದಾಗ ಶರೋನ್ ತ್ರಿವೇದಿ ಎಂಬ ಅಪರಿಚಿತ ವ್ಯಕ್ತಿಯ ಪರಿಚಯವಾಗಿದೆ. ಆತ ಹೂಡಿಕೆ ಬಗ್ಗೆ ಮಾಹಿತಿ ನೀಡಿದ್ದ. ಬಳಿಕ ವಾಟ್ಸಾಪ್‌ ಮೂಲಕ ಆತ ನಿರಂತವಾಗಿ ಸಂಪರ್ಕದಲ್ಲಿದ್ದ. ಆತ ಫೈರಯ್ಸ್ ಮಾರ್ಕೆಟ್ ಮತ್ತು ಝೆರೋದಾ ಎಂಬ ಟ್ರೇಡಿಂಗ್ ಕಂಪೆನಿಯಲ್ಲಿ ಹೂಡಿಕೆ ಮಾಡಲು ತಿಳಿಸಿದ್ದಾನೆ. ಆತನ ಮಾತನ್ನು ನಂಬಿದ್ದ ನಾನು ಎ.21ರಿಂದ ಮೇ 31ರವರೆಗೆ ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ 24,22,077ರೂ. ಪಾವತಿ ಮಾಡಿದ್ದೆ. ನಂತರದ ದಿನಗಳಲ್ಲಿ ಸ್ವಲ್ಪ ಹಣವನ್ನು ವಾಪಸ್ ನೀಡಿದ್ದು, ಇನ್ನುಳಿದ ಹಣವನ್ನು ಹಿಂತಿರುಗಿಸುವಂತೆ ಕೇಳಿದಾಗ ಟ್ಯಾಕ್ಸ್ ಹಣ ಹಾಗೂ ಕಮಿಷನ್ ಹಣವನ್ನು ಕಟ್ಟುವಂತೆ ಹೇಳಿದ್ದ. ಈ ಬಗ್ಗೆ ಅನುಮಾನ ಬಂದು ವಿಚಾರಣೆ ನಡೆಸಿದಾಗ ಮೋಸ ಹೋಗಿರುವುದು ಅರಿವಾಗಿದೆ ಎಂದು ಹಣ ಕಳೆದುಕೊಂಡ ವ್ಯಕ್ತಿಯು ದೂರಿನಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News