×
Ad

ಜಾಗತಿಕ ಬಂಟ ಪ್ರತಿಷ್ಠಾನ ಪ್ರಶಸ್ತಿಗೆ ಜಪ್ಪು ದಯಾನಂದ ಶೆಟ್ಟಿ ಆಯ್ಕೆ

Update: 2023-09-08 18:08 IST

ಮಂಗಳೂರು, ಸೆ.8: ಜಾಗತಿಕ ಬಂಟ ಪ್ರತಿಷ್ಠಾನವು ಡಾ. ಡಿ.ಕೆ.ಚೌಟ ದತ್ತಿನಿಧಿಯಿಂದ ನೀಡುವ ವಾರ್ಷಿಕ ಪ್ರಶಸ್ತಿಗೆ ಹಿರಿಯ ಯಕ್ಷಗಾನ ಕಲಾವಿದ ತುಳು-ಕನ್ನಡ ಪ್ರಸಂಗಗಳ ವೇಷಧಾರಿ ಜಪ್ಪುದಯಾನಂದ ಶೆಟ್ಟಿ ಆಯ್ಕೆ ಆಗಿದ್ದಾರೆ.

ಪ್ರೊ.ಜಿ.ಆರ್.ರೈ, ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಮತ್ತು ಪಳ್ಳಿ ಕಿಶನ್ ಹೆಗ್ಡೆ ಅವರನ್ನು ಒಳಗೊಂಡ ಸಲಹಾ ಸಮಿತಿಯ ಶಿಫಾರಸಿನ ಮೇರೆಗೆ ಈ ಪ್ರಶಸ್ತಿ ನೀಡಲಾಗುತ್ತಿದೆಯೆಂದು ಪ್ರತಿಷ್ಠಾನದ ಕಾರ್ಯದರ್ಶಿ ವೈ.ಸುಧೀರ್ ಕುಮಾರ್ ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕ, ಕುಂಡಾವು, ದೇಲಂತಪುರಿ, ಸಸಿಹಿತ್ಲು ಮೇಳಗಳಲ್ಲಿ 52 ವರ್ಷ ತಿರುಗಾಟ ಮಾಡಿರುವ ದಯಾನಂದ ಶೆಟ್ಟರು ಬೆಳ್ತಂಗಡಿ ಸವಣಾಲಿನ ದೇವಪ್ಪಶೆಟ್ಟಿ ಮತ್ತು ಲಕ್ಷ್ಮಿ ದಂಪತಿಯ ಪುತ್ರ. ಕೇವಲ 2ನೆಯ ತರಗತಿ ಕಲಿತ ಇವರು ತನ್ನ 12ನೇ ವಯಸ್ಸಿನಲ್ಲಿ ಯಕ್ಷಗಾನ ವೃತ್ತಿಗಿಳಿದು ಹಲವು ಹಿರಿಯ ಕಲಾವಿದರ ಒಡನಾಟದಲ್ಲಿ ಖ್ಯಾತರಾದರು. ಕರ್ನಾಟಕ ಮೇಳವೊಂದರಲ್ಲೇ 36 ವರ್ಷ ಪೂರೈಸಿದ ಇವರು ಹಲವು ದಿಗ್ಗಜರೊಂದಿಗೆ ಸ್ತ್ರೀವೇಷ, ಪುಂಡು ವೇಷ, ಇದಿರು ವೇಷ, ಹಾಸ್ಯ, ಬಣ್ಣ ಹೀಗೆ ಎಲ್ಲಾ ಪಾತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ.

ಕರ್ನಾಟಕ ಬಯಲಾಟ ಅಕಾಡಮಿ ಪ್ರಶಸ್ತಿ, ಅಳಿಕೆ, ಬೋಳಾರ, ಪುಳಿಂಚ, ಅರುವ ಪ್ರತಿಷ್ಠಾನಗಳ ಪ್ರಶಸ್ತಿ, ಯಕ್ಷಗಾನ ಕಲಾರಂಗ, ಶ್ರೀಕೃಷ್ಣ ಯಕ್ಷ ಸಭಾ, ಜಿಲ್ಲಾ ಸಾಹಿತ್ಯ ಪರಿಷತ್, ಮುಂಬೈ ತೀಯಾ ಉತ್ಸವ ಇತ್ಯಾದಿಗಳಿಂದ ಗೌರವ - ಸನ್ಮಾನಕ್ಕೆ ಭಾಜನರಾಗಿದ್ದಾರೆ.

ಸೆ.16ರಂದು ನಗರದಲ್ಲಿ ಜರಗುವ ವಾರ್ಷಿಕ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುರತ್ತದೆ. ಪ್ರಶಸ್ತಿಯು 25 ಸಾವಿರ ರೂ. ನಗದು ಹೊಂದಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News