×
Ad

ಕಡಬ | ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ ಪ್ರಕರಣ: ಇನ್ನಿಬ್ಬರು ಪೊಲೀಸ್ ವಶಕ್ಕೆ

Update: 2024-03-12 13:37 IST

ಕಡಬ, ಮಾ.12: ಕಡಬ ಸರಕಾರಿ ಕಾಲೇಜಿನ ಮೂವರು ಪಿಯು ವಿದ್ಯಾರ್ಥಿನಿಯರ ಮೇಲಿನ ಆ್ಯಸಿಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗೆ ಸಹಕರಿಸಿದ ಆರೋಪದಲ್ಲಿ ಇನ್ನಿಬ್ಬರನ್ನು ಕಡಬ ಪೊಲೀಸರು ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ.

ಈ ಪ್ರಕರಣದಲ್ಲಿ ಬಂಧಿತ ಆರೋಪಿ ಕೇರಳದ ಮಲಪ್ಪುರಂ ನಿವಾಸಿ ಅಭಿನ್ ಗೆ ಸಹಕರಿಸಿದ ಆರೋಪದಲ್ಲಿ ಇಬ್ಬರನ್ನು ಕಡಬ ಪೊಲೀಸರು ಕೇರಳದಿಂದ ವಶಕ್ಕೆ ಪಡೆದು ಕಡಬಕ್ಕೆ ಕರೆ ತಂದಿದ್ದು, ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ವಾರದ ಹಿಂದೆ ದ್ವಿತೀಯ ಪಿಯು ಪರೀಕ್ಷೆ ಬರೆಯಲು ಸಿದ್ದರಾಗುತ್ತಿದ್ದ ಕಡಬ ಸರಕಾರಿ ಪದವಿ ಪೂರ್ವ ಕಾಲೇಜಿನ ಓರ್ವ ವಿದ್ಯಾರ್ಥಿಯನ್ನು ಗುರಿಯಾಗಿಸಿ ಆ್ಯಸಿಡ್ ದಾಳಿ ನಡೆದಿದೆ. ಈ ವೇಳೆ ಆಕೆಯ ಜೊತೆಗಿದ್ದ ಇನ್ನಿಬ್ಬರು ಕೂಡಾ ಗಾಯಗೊಂಡಿದ್ದರು. ಕೃತ್ಯ ಎಸಗಿದ ಆರೋಪಿ ಮಲಪ್ಪುರಂ ನಿವಾಸಿ ಅಭಿನ್ ನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿ ಇನ್ನಿಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News